ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ: ದೇಶೀಯ ಸರಕು ನಿರ್ವಹಣೆಯಲ್ಲಿ ಪ್ರಗತಿ ಸ್ಥಿರ

Update: 2023-10-03 16:37 GMT

ಮಂಗಳೂರು, ಅ.3: ದೇಶೀಯ ಸರಕು ನಿರ್ವಹಣೆಯಲ್ಲಿ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಕಳೆದ ಐದು ತಿಂಗಳಲ್ಲಿ ಸ್ಥಿರ ಪ್ರಗತಿಯನ್ನು ಕಾಯ್ದುಕೊಂಡಿದೆ.

ವಿಮಾನ ನಿಲ್ದಾನದ ಇಂಟಿಗ್ರೇಟೆಡ್ ಕಾರ್ಗೋ ಟರ್ಮಿನಲ್ (ಐಸಿಟಿ) ಮೇ 1ರಂದು ಉದ್ಘಾಟನೆಯಾದಾಗಿನಿಂದ ಸೆಪ್ಟೆಂಬರ್ 30 ರವರೆಗೆ 1676.21 ಟನ್ ದೇಶೀಯ ಸರಕುಗಳನ್ನು ನಿರ್ವಹಿಸಿದೆ

ಒಟ್ಟು ಸರಕುಗಳಲ್ಲಿ ಐಸಿಟಿ 1560.23 ಟನ್ ದೇಶದ ವಿವಿಧ ಸ್ಥಳಗಳಿಗೆ ರವಾನೆಯ ಸರಕುಗಳನ್ನು ನಿರ್ವಹಿಸಿದೆ. ಇದರಲ್ಲಿ ಬಹುಪಾಲು ಅಂಚೆ ಪಾರ್ಸಲ್‌ಗಳಾಗಿವೆ. ಸಾಮಾನ್ಯ ಸರಕು, ಸಮುದ್ರ ಉತ್ಪನ್ನಗಳು, ಅಲಂಕಾರಿಕ ಮೀನುಗಳು , ಬೆಲೆ ಬಾಳುವ ವಸ್ತುಗಳು ಮತ್ತಿತರ ಸರಕುಗಳನ್ನು ಸಣ್ಣ ಪ್ರಮಾಣದಲ್ಲಿ ನಿರ್ವಹಿಸಿದೆ. ಹೊರಗಿನಿಂದ ಬಂದ ಸರಕುಗಳಲ್ಲಿ ಅಂಚೆ ಕಚೇರಿ ಮೇಲ್, ಬೆಲೆಬಾಳುವ ವಸ್ತುಗಳು, ಯಂತ್ರೋಪಕರಣಗಳ ಭಾಗಗಳು, ಔಷಧ , ವೈದ್ಯಕೀಯ ಉಪಕರಣಗಳು ಇತ್ಯಾದಿ ಸೇರಿವೆ.

ಸ್ಥಳೀಯ ಸಾಗರ ಉತ್ಪನ್ನ ರಫ್ತುದಾರರು ತಮ್ಮ ಉತ್ಪನ್ನಗಳನ್ನು ಸಾಗರೋತ್ತರ ಗ್ರಾಹಕರಿಗೆ ಸಾಗಿಸಲು ಐಸಿಟಿಯನ್ನು ಬಳಸುತ್ತಿದ್ದಾರೆ ವಿಮಾನ ನಿಲ್ದಾಣದ ವಕ್ತಾರರು ಮಾಹಿತಿ ನೀಡಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಸರಕು ಟರ್ಮಿನಲ್ ಪ್ರಾರಂಭಗೊಂಡಿರುವುದು ರಫ್ತುದಾರರಿಗೆ ವರದಾನವಾಗಿದೆ ಎಂದು ಸಮುದ್ರ ಉತ್ಪನ್ನಗಳನ್ನು ಕೋಲ್ಕತ್ತಾ ಮೂಲಕ ಚೀನಾಕ್ಕೆ ಕಳುಹಿಸುವ ರಫ್ತುದಾರರಲ್ಲಿ ಒಬ್ಬರಾಗಿರುವ ಫಯಾಝ್ ಅಹ್ಮದ್ ಹೇಳಿರುವುದಾಗಿ ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News