ಮಂಗಳೂರು: ಬೈಕ್‌ಗೆ ಲಾರಿ ಢಿಕ್ಕಿ; ಎಂಬಿಎ ವಿದ್ಯಾರ್ಥಿ ಮೃತ್ಯು

Update: 2024-09-20 15:23 GMT

ಜಾಸಿಮ್

ಮಂಗಳೂರು, ಸೆ.20: ನಗರದ ಕುಂಟಿಕಾನ ಪ್ಲೈಓವರ್‌ನ ಮೇಲೆ ಲಾರಿಯೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.

ಪಾಣೆಮಂಗಳೂರು ಸಮೀಪದ ಮೆಲ್ಕಾರ್ ನಿವಾಸಿ ಜಾಸಿಮ್ (18) ಮೃತಪಟ್ಟ ವಿದ್ಯಾರ್ಥಿ.

ನಗರ ಹೊರಲವಲಯದ ಕೂಳೂರಿನಲ್ಲಿರುವ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂಬಿಎ ಓದುತ್ತಿದ್ದ ಜಾಸಿಮ್ ಶುಕ್ರವಾರ ಸಂಜೆ ಕೂಳೂರಿನಿಂದ ಕೆಪಿಟಿ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಲಾರಿಯೊಂದು ಢಿಕ್ಕಿ ಹೊಡೆಯಿತು ಎನ್ನಲಾಗಿದೆ. ಪರಿಣಾಮ ನಿಯಂತ್ರಣ ತಪ್ಪಿದ ಜಾಸಿಮ್ ರಸ್ತೆಗೆ ಬಿದ್ದಿದ್ದರು. ಇದರಿಂದ ಗಂಭೀರ ಗಾಯಗೊಂಡ ಅವರು ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಮಂಗಳೂರು ದಕ್ಷಿಣ ಸಂಚಾರ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News