ಮಂಗಳೂರು: ನೂರೇ ಮದೀನಾ ಮೀಲಾದ್ ಫೆಸ್ಟ್

Update: 2023-09-25 12:48 GMT

ಮಂಗಳೂರು,ಸೆ.25:ಅಶೈಖ್ ಅಸೈಯದ್ ಜಲಾಲ್ ಮಸ್ತಾನ್ ಮುಹಮ್ಮದ್ ಮೌಲಾ ಹಿಫ್ಲುಲ್ ಖುರ್‌ಆನ್ ಕಾಲೇಜು ವಿದ್ಯಾರ್ಥಿಗಳಿಂದ ಮೀಲಾದುನ್ನಬಿ ಪ್ರಯುಕ್ತ ನೂರೇ ಮದೀನಾ ಮೀಲಾದ್ ಫೆಸ್ಟ್ ಹಾಗೂ ಬುರ್ದಾ ಮಜ್ಲಿಸ್ ಕಾರ್ಯಕ್ರಮ ಶನಿವಾರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಸ್ಜಿದ್ ಝೀನತ್ ಬಕ್ಷ್ ಜುಮಾ ಮಸೀದಿಯ ಅಧ್ಯಕ್ಷ, ಯೆನೆಪೊಯ ವಿವಿಯ ಕುಲಾಧಿಪತಿ ಡಾ. ಯೆನೆಪೋಯ ಅಬ್ದುಲ್ಲಾ ಕುಂಞಿ 2011ರಲ್ಲಿ ಆರಂಭಗೊಂಡ ಈ ಕಾಲೇಜಿನಲ್ಲಿ ಈವರೆಗೆ 72 ವಿದ್ಯಾರ್ಥಿಗಳು ಹಾಫಿಳ್ ಆಗಿದ್ದಾರೆ. ಸಮುದಾಯಕ್ಕೆ ಸಮರ್ಪಣೆಗೊಂಡ ಈ ವಿದ್ಯಾರ್ಥಿಗಳು ಸಮಾಜಕ್ಕೆ ಮಾದರಿ ಯಾಗುವ ವಿಶ್ವಾಸವಿದೆ ಎಂದರು.

ದ.ಕ. ಜಿಲ್ಲಾ ಖಾಝಿ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್‌ಅಝ್ಹರಿ ದುಆಗೈದು ಕಾರ್ಯಕ್ರಮ ಉದ್ಘಾಟಿಸಿದರು. ಮಸ್ಜಿದ್ ಝೀನತ್ ಭಕ್ಷ್ ಆಡಳಿತ ಸಮಿತಿಯ ಉಪಾಧ್ಯಕ್ಷ ಅಶ್ರಫ್ ಕೆ.ಇ., ಖತೀಬ್ ಅಬುಲ್ ಅಕ್ರಂ ಮುಹಮ್ಮದ್ ಬಾಖವಿ, ಹಿಫ್ಲುಲ್ ಖುರ್‌ಆನ್ ಕಾಲೇಜಿನ ಉಪನ್ಯಾಸಕ ಹಾಫಿಲ್ ಅಝರುದ್ದೀನ್ ಅನ್ಸಾರಿ ಮಾತನಾಡಿದರು. 

ಎಂಟುವರೆ ಗಂಟೆಯಲ್ಲಿ ಸಂಪೂರ್ಣ ಖುರ್‌ಆನ್ ದೌರಾ ನೀಡಿದ ಹಾಫಿಳ್ ಮುಹಮ್ಮದ್ ಶಹೀಮ್ ಅವರನ್ನು ಸನ್ಮಾನಿಸ ಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ಮಸ್ಜಿದ್ ಝೀನತ್ ಭಕ್ಷ್ ಕೋಶಾಧಿಕಾರಿ ಸೈಯ್ಯದ್ ಅಹ್ಮದ್ ಬಾಷಾ ತಂಳ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಮುಹಮ್ಮದ್ ಅಶ್ರಫ್ ಹಳೆಮನೆ, ಅದ್ದು ಹಾಜಿ, ಐ.ಮೊಯ್ದಿನಬ್ಬ, ಕಾಲೇಜಿನ ಉಪನ್ಯಾಸಕ ಮುಹಮ್ಮದ್ ಜುನೈದ್ ಅಝ್ಹರಿ ಉಪಸ್ಥಿತರಿದ್ದರು.

ಮಸ್ಜಿದ್ ಝೀನತ್ ಭಕ್ಷ್ ಕಾರ್ಯಕಾರಿ ಸಮಿತಿಯ ಸದಸ್ಯ ಹಾಜಿ ಎಸ್.ಎಂ. ರಶೀದ್ ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಹಾಜಿ ಅಬ್ದುಲ್ ಸಮದ್ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News