ಮಂಗಳೂರು| ಮೃತ ವ್ಯಕ್ತಿಯ ಕುಟುಂಬಕ್ಕೆ 1.35 ಕೋ.ರೂ. ಪರಿಹಾರ ನೀಡಲು ಆದೇಶ

Update: 2024-10-03 14:37 GMT

ಮಂಗಳೂರು, ಅ.3: ವಾಹನ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 1.35 ಕೋ.ರೂ. ಪರಿಹಾರ ನೀಡಲು ಮಂಗಳೂರಿನ ಒಂದನೇ ಹೆಚ್ಚುವರಿ ಸೀನಿಯರ್ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ಲಕ್ಷ್ಮಿ ಜಿ.ಎಂ. ವಿಮಾ ಕಂಪನಿಗೆ ಆದೇಶಿಸಿದ್ದಾರೆ.

ಪಣಂಬೂರಿನ ಎಂಸಿಎಫ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಮಹೇಶ್ ಭಟ್ 2018ರ ಮೇ 18ರಂದು ತನ್ನ ಬೈಕ್‌ನಲ್ಲಿ ಕರ್ತವ್ಯಕ್ಕೆ ತೆರಳುದ್ದಾಗ ನಗರದ ಕೊಟ್ಟಾರ ಚೌಕಿ ಬಳಿಯ ರಾಜಸ್ಥಾನ ನೋಂದಣಿಯ ಲಾರಿಯೊಂದು ಢಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಮಹೇಶ್ ಭಟ್ ಮೃತಪಟ್ಟಿದ್ದರು. ಅದರಂತೆ ಮಂಗಳೂರಿನ ಒಂದನೇ ಹೆಚ್ಚುವರಿ ಸೀನಿಯರ್ ಸಿವಿಲ್ ಜಡ್ಜ್ ನ್ಯಾಯಾಲಯದಲ್ಲಿ ಮೋಟಾರು ವಾಹನ ಅಪಘಾತ ಪರಿಹಾರ ಕಾಯ್ದೆಯಡಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲಾಗಿತ್ತು.

ವಾದ-ಪ್ರತಿವಾದ ಆಲಿಸಿದ ವಿಮಾ ಸಂಸ್ಥೆಯಾದ ಯುನಿವರ್ಸಲ್ ಸೊಂಪೋ ಜನರಲ್ ಇನ್ಸೂರೆನ್ಸ್ ಕಂಪನಿಯು 1.06 ಕೋ.ರೂ. ಪರಿಹಾರವನ್ನು ಶೇ.6ರಷ್ಟು ಬಡ್ಡಿ ಸಹಿತ 1.35 ಕೋ.ರೂ.ಗಳ ಪರಿಹಾರವನ್ನು ಅರ್ಜಿದಾರರಿಗೆ ನೀಡಲು ನ್ಯಾಯಾಲಯವು ಆದೇಶ ನೀಡಿದೆ.

ಪರಿಹಾರ ಧನ ಪಡೆಯಲು ಮೃತರ ಪತ್ನಿ, ಅವರ ಪುತ್ರ ಹಾಗೂ ಮೃತರ ಹೆತ್ತವರು ಅರ್ಹರಾಗಿದ್ದಾರೆಂದು ನ್ಯಾಯಾಲಯವು ತಿಳಿಸಿದೆ. ಅರ್ಜಿದಾರರ ಪರವಾಗಿ ವಕೀಲರಾದ ಎ. ದಿನೇಶ್ ಭಂಡಾರಿ, ಕೆ.ಎಸ್.ಎನ್. ಅಡಿಗ, ಪ್ರೀತಿಕಾ ಕೆ.ಎಂ., ತೃಪ್ತಿ ವಾದಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News