ಮಂಗಳೂರು: ರೈಲ್ವೇ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

Update: 2023-11-03 12:35 GMT

ಮಂಗಳೂರು: ದೇಶದ ಆರ್ಥಿಕತೆಯ ಜೀವಾಳ ಹಾಗೂ ಜನತೆಯ ಜೀವನಾಡಿ ರೈಲ್ವೇ ವಲಯದ ಖಾಸಗೀಕರಣ ಖಂಡಿಸಿ ರೈತ ಕಾರ್ಮಿಕರ ನೇತ್ರತ್ವದಲ್ಲಿ ದೇಶಾದ್ಯಂತ ರೈಲ್ವೇ ನಿಲ್ದಾಣದೆದುರು ಹಮ್ಮಿಕೊಳ್ಳಲಾದ ಪ್ರತಿಭಟನೆಯ ಭಾಗವಾಗಿ ದ.ಕ. ಜಿಲ್ಲೆಯ ರೈತ ಕಾರ್ಮಿಕ ಹಾಗೂ ಜನಪರ ಸಂಘಟನೆಗಳ ಜಂಟಿ ನೇತ್ರತ್ವದಲ್ಲಿ ನಗರದ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದೆದುರು ಪ್ರತಿಭಟನಾ ಪ್ರದರ್ಶನ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಯಾದವ ಶೆಟ್ಟಿ, ಕೇಂದ್ರದ ನರೇಂದ್ರ ಮೋದಿ ಸರಕಾರವು ನವ ಉದಾರೀಕರಣ ನೀತಿಗಳನ್ನು ಅತ್ಯಂತ ವೇಗವಾಗಿ ಜಾರಿಗೊಳಿಸುತ್ತಿರುವ ಪರಿಣಾಮ ವಾಗಿ ದೇಶದ ಸಂಪತ್ತನ್ನು ಸಂಪೂರ್ಣವಾಗಿ ಕಾರ್ಪೊರೇಟ್ ಗಳ ಕೈಗೊಪ್ಪಿಸುವ ತವಕದಲ್ಲಿದೆ. ರೈಲ್ವೇ ಖಾಸಗೀಕರಣ ದಿಂದಾಗಿ ರೈಲ್ವೇಯಲ್ಲಿ ದುಡಿಯುವ ಲಕ್ಷಾಂತರ ಸಂಖ್ಯೆಯ ಕಾರ್ಮಿಕರು ಮಾತ್ರವಲ್ಲದೆ ಜನಸಾಮಾನ್ಯರ ಬದುಕು ಕೂಡ ಅಪಾಯದ ಅಂಚಿನತ್ತ ಸಾಗಲಿದೆ ಎಂದರು.

ಎಐಟಿಯುಸಿ ಜಿಲ್ಲಾ ನಾಯಕರಾದ ಸೀತಾರಾಮ ಬೇರಿಂಜರವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ರಚಿಸಿದ ಬಿಬೇಕ್ ರಾಯ್ ಸಮಿತಿ ಶಿಫಾರಸ್ಸಿನಂತೆ ರೈಲ್ವೇಯನ್ನು 4 ವಿಭಾಗಗಳನ್ನಾಗಿ ವಿಭಜಿಸಿ ಖಾಸಗೀಕರಣಕ್ಕೆ ಮುಂದಾಗಿರುವುದು ನವ ಉದಾರೀಕರಣ ನೀತಿಯ ಫಲವಾಗಿದೆ ಎಂದರು.

ಇಂಟಕ್ ಜಿಲ್ಲಾ ನಾಯಕರಾದ ಸುರೇಶ್ ಬಾಬು ಮಾತನಾಡಿ, ರೈಲ್ವೇ ವಲಯವನ್ನು ವಿಭಜಿಸಿ ಖಾಸಗೀಕರಣ ಗೊಳಿಸುತ್ತಿರುವ ಆಡಳಿತ ವರ್ಗದ ಪ್ರಮುಖ ನೀತಿ ದೇಶಕ್ಕೆ ವಿನಾಶಕಾರಿಯಾಗಿದೆ.ಇದು ರೈಲ್ವೇ ಕ್ಷೇತ್ರದ ಸರ್ವ ನಾಶವಲ್ಲದೆ ಪ್ರಯಾಣಿಕರ ಹಾಗೂ ಸಿಬ್ಬಂದಿ ಜೀವಗಳೊಂದಿಗೆ ಚೆಲ್ಲಾಟ ಎಂದು ಆತಂಕ ವ್ಯಕ್ತಪಡಿಸಿದರು.

ಸಿಐಟಿಯು ಜಿಲ್ಲಾ ನಾಯಕರಾದ ಸುಕುಮಾರ್ ತೊಕ್ಕೋಟು ಮಾತನಾಡಿ, ನವ ಉದಾರೀಕರಣ ವ್ಯವಸ್ಥೆಯಲ್ಲಿ ಖಾಸಗೀ ಕರಣ ಪ್ರಮುಖ ಪ್ರಕ್ರಿಯೆಯಾಗಿದ್ದು, ಅದು ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಿಸುವುದರ ಜೊತೆಗೆ ಅಗತ್ಯ ವಲಯಗಳಾದ ಆರೋಗ್ಯ ಶಿಕ್ಷಣ ಸಾರಿಗೆ ನೈಸರ್ಗಿಕ ಸಂಪನ್ಮೂಲಗಳಾದ ಭೂಮಿ ಗಣಿ ಅರಣ್ಯ ನೀರು ಸೇರಿದಂತೆ ಎಲ್ಲವನ್ನೂ ಕಾರ್ಪೊರೇಟ್ ಗಳ ಕೈಗೆ ಹಸ್ತಾಂತರಿಸುವುದಾಗಿದೆ ಎಂದು ಹೇಳಿದರು.

ಜಂಟಿ ವೇದಿಕೆಯ ಪ್ರಧಾನ ಸಂಚಾಲಕರಾದ ಸುನಿಲ್ ಕುಮಾರ್ ಬಜಾಲ್ ರವರು ಪ್ರಾಸ್ತಾವಿಕ ಮಾತನಾಡಿ, ನವೆಂಬರ್ ತಿಂಗಳಲ್ಲಿ ದೇಶಾದ್ಯಂತ ನಡೆಯಲಿರುವ ಪ್ರಚಾರಾಂದೋಲನದ ಮಹತ್ವವನ್ನು ವಿವರಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ರಾಜ್ಯ ರೈತ ಸಂಘದ ನಾಯಕರಾದ ರವಿಕಿರಣ ಪೂಣಚ,ಮಹೇಶ್ ಪ್ರಭು,ಮಹಿಳಾ ಮುಖಂಡ ರಾದ ಮಂಜುಳಾ ನಾಯಕ್ ಮಾತನಾಡಿ ಕೇಂದ್ರ ಸರ್ಕಾರದ ನೀತಿಗಳನ್ನು ಖಂಡಿಸಿದರು.

ಪ್ರತಿಭಟನೆಯಲ್ಲಿ ಎಚ್‌ಎಂಎಸ್‌ನ ರಾಜ್ಯ ನಾಯಕರಾದ ಸುರೇಶ್ಚಂದ್ರ ಶೆಟ್ಟಿ,ರಘುರಾಮ ಶೆಟ್ಟಿ, ಸಿಐಟಿಯುನ ಮುಖಂಡ ರಾದ ಜೆ.ಬಾಲಕ್ರಷ್ಣ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು,ವಸಂತ ಆಚಾರಿ,ಪದ್ಮಾವತಿ ಶೆಟ್ಟಿ, ವಸಂತಿ ಕುಪ್ಪೆಪದವು, ಜಯಂತ ನಾಯಕ್, ನೋಣಯ್ಯ ಗೌಡ, ಜನಾರ್ಧನ ಕುತ್ತಾರ್, ಎಐಟಿಯುಸಿ ನಾಯಕರಾದ ಬಿ.ಶೇಖರ್, ವಿ.ಕುಕ್ಯಾನ್, ಕರುಣಾಕರ್, ಸುರೇಶ್ ಕುಮಾರ್, ಸುಧಾಕರ ಉರ್ವಾ,ರಾಮ ವಿಟ್ಲ,ತಿಮ್ಮಪ್ಪ ಕಾವೂರು, ಇಂಟಕ್‌ಮುಖಂಡರಾದ ಮನೋಹರ ಶೆಟ್ಟಿ, ರಾಜೇಶ್, ಬಿ.ಕೆ.ಸುರೇಶ್, ವಿಮಾ ನೌಕರರ ಸಂಘದ ಬಿ.ಎನ್ ದೇವಾಡಿಗ,ರೈತ ಸಂಘಟನೆಗಳ ನಾಯಕರಾದ ಕ್ರಷ್ಣಪ್ಪ ಸಾಲ್ಯಾನ್, ಸದಾಶಿವದಾಸ್, ಸಾಹುಲ್ ಹಮೀದ್,ಡಿವೈಎಫ್‌ಐ ನಾಯಕರಾದ ಮುನೀರ್ ಕಾಟಿಪಳ್ಳ, ಬಿ.ಕೆ.ಇಮ್ತಿಯಾಜ್, ಸಂತೋಷ್ ಬಜಾಲ್,ನವೀನ್ ಕೊಂಚಾಡಿ, ರಿಜ್ವಾನ್ ಹರೇಕಳ, ಜಗದೀಶ್ ಬಜಾಲ್, ಎಐವೈಎಫ್ ಮುಖಂಡರಾದ ಪುಷ್ಪರಾಜ್ ಬೋಳೂರು, ಜಗತ್ಪಾಲ್, ಮಹಿಳಾ ಮುಖಂಡರಾದ ಜಯಂತಿ ಶೆಟ್ಟಿ, ಭಾರತಿ ಬೋಳಾರ, ಸುಲೋಚನ ಕವತ್ತಾರು, ಭಾರತಿ ಪ್ರಶಾಂತ್, ಮಮತಾ, ಶಮಿತಾ,ವಿದ್ಯಾ ಶೆಣೈ, ಮಾಲಿನಿ, ದಲಿತ ನಾಯಕರಾದ ರಾಧಾಕ್ರಷ್ಣ ಬೊಂಡಂತಿಲ, ಎಂ.ದೇವದಾಸ್,ನಾಗೇಶ್ ಚಿಲಿಂಬಿ,ಲಕ್ಷ್ಮಣ್ ಕಾಂಚನ್,ಮಂಜಪ್ಪ ಪುತ್ರನ್, ಸರೋಜಿನಿ,ಆದಿವಾಸಿ ಹಕ್ಕುಗಳ ಸಮಿತಿ ನಾಯಕರಾದ ಕರಿಯ ಕೆ, ರಶ್ಮಿ ವಾಮಂಜೂರು, ಶೇಖರ್, ವಿನೋದ್, ಸಮುದಾಯದ ಮನೋಜ್ ವಾಮಂಜೂರು, ಪ್ರಗತಿಪರ ಅಧ್ಯಾಪಕರ ವೇದಿಕೆಯ ಡಾ.ವಸಂತ ಕುಮಾರ್, ಸಾಮರಸ್ಯದ ಸಮರ್ಥ ಭಟ್, ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಕ್ವೀನಿ ಪರ್ಸಿ ಆನಂದ್, ಫ್ಲೇವಿ ಕ್ರಾಸ್ತಾ, ಪಿಎಸಿಎಲ್ ಏಜೆಂಟರ ಹೋರಾಟ ಸಮಿತಿಯ ಅಸುಂತ ಡಿಸೋಜ, ತೆಲ್ಮಾ ಡಿಸೋಜ, ರೋಸ್ಲಿನ್, ವಾಯಿಲೆಟ್ ಮುಂತಾದವರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News