ಮಂಗಳೂರು| ಡಿ.13 ಮತ್ತು 14ರಂದು ವಿಶೇಷ ಮಕ್ಕಳ ‘ಟ್ವಿಂಕ್ಲಿಂಗ್ ಸ್ಟಾರ್ 2023’ ಕಾರ್ಯಕ್ರಮ

Update: 2023-12-11 09:28 GMT

ಮಂಗಳೂರು: ಶಕ್ತಿನಗರದ ಸಾನಿಧ್ಯ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿಯುತ ಶಾಲೆ ಮತ್ತು ತರಬೇತಿ ಸಂಸ್ಥ್ಥೆ 20 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಮಟ್ಟದ ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳ ಜಾನಪದ ನೃತ್ಯೋತ್ಸವ ಟ್ವಿಕ್ಲಿಂಗ್ ಸ್ಟಾರ್ 2023 ಡಿ.13 ಮತ್ತು 14ರಂದು ನಗರದ ಪುರಭವನದಲ್ಲಿ ಆಯೋಜಿಸಲಾಗಿದೆ.

ಸುದ್ದಿಗೋಷ್ಟಿಯಲ್ಲಿ ಸೋಮವಾರ ಈ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ಆಡಳಿತಾಧಿಕಾರಿ ಡಾ. ವಸಂತ ಕುಮಾರ್ ಶೆಟ್ಟಿ, ಡಿ.13ರಂದು ಬೆಳಗ್ಗೆ 9.15ಕ್ಕೆ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನಿಂದ ಪುರಭವನದ ವರೆಗೆ ಸಾರ್ವಜನಿಕರಿಗೆ ಅರಿವಿನ ಮೆರವಣಿಗೆ ನಡೆಯಲಿದೆ. 11ಕ್ಕೆ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ರೋಟರಿ ಜಿಲ್ಲಾ ಗವರ್ನರ್ ಎಚ್.ಆರ್.ಕೇಶವ್ ಮೊದಲಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಈಗಾಗಲೇ  ರಾಜ್ಯದ ವಿವಿಧೆಡೆಯ ಸುಮಾರು 35 ಶಾಲೆಗಳು ನೋಂದಾಯಿಸಿಕೊಂಡಿದ್ದು, 500ರಷ್ಟು ಹೆಚ್ಚು ಭಿನ್ನ ಸಾಮರ್ಥ್ಯದ ಕಲಾವಿದರು, 150ಕ್ಕೂ ಹೆಚ್ಚು ಅವರ ಸಹಾಯಕರು ಭಾಗವಹಿಸಲಿದ್ದಾರೆ. ವಿಜೇತ ತಂಡಕ್ಕೆ ಪ್ರಥಮ 25 ಸಾವಿರ, ದ್ವಿತೀಯ 15 ಸಾವಿರ, ತೃತೀಯ 15 ಸಾವಿರ ರೂ. ನಗದು ಬಹುಮಾನ, 5 ಶಾಲೆಗಳಿಗೆ ತಲಾ 5 ಸಾವಿರ ಸಮಾಧಾನಕರ ಬಹುಮಾನ ದೊರೆಯಲಿದೆ. 14ರಂದು ಮಧ್ಯಾಹ್ನ 2 ಗಂಟೆಗೆ ಸಾನಿಧ್ಯ ಸಂಸ್ಥೆಯ ಮಕ್ಕಳಿಂದ ಕಲ್ಲುರ್ಟಿ ಕಲ್ಕುಡ ನಾಟಕ ಪ್ರದರ್ಶನಗೊಳ್ಳಲಿದ್ದು, 3.30ಕ್ಕೆ ಸಮಾರೋಪ, ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದರು.

ಅಧ್ಯಕ್ಷ ಮಹಾಬಲ ಮಾರ್ಲ, ಖಜಾಂಚಿ ಜಗದೀಶ್ ಶೆಟ್ಟಿ, ಟ್ವಿಂಕ್ಲಿಂಗ್ ಸ್ಟಾರ್ಸ್‌ ಸಂಚಾಲಕರಾದ ಅಶ್ವಿತ್ ಕೊಟ್ಟಾರಿ, ರಾಕೇಶ್ ಶೆಟ್ಟಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News