ಮಂಗಳೂರು: ಡಿ.6ರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ

Update: 2023-12-05 15:24 GMT

ಸಾಂದರ್ಭಿಕ ಚಿತ್ರ

ಮಂಗಳೂರು, ಡಿ.5: ಮಹಾನಗರಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ, ಬೆಂದೂರ್‌ವೆಲ್ , ಪಣಂಬೂರು 1,000 ಎಂ.ಎಂ ವ್ಯಾಸದ ಮುಖ್ಯ ಕೊಳವೆಯನ್ನು ನಾಗೂರಿ ಮಾರುಕಟ್ಟೆ ಬಳಿ ಬಲಪಡಿಸುವ ಕಾಮಗಾರಿ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಡಿ.6 ರಿಂದ 8 ರವರೆಗೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ತುಂಬೆ ರಾಮಲ್ ಕಟ್ಟೆ ಬಳಿ ಕೆಯುಐಡಿಎಫ್‌ಸಿ ವತಿಯಿಂದ ಬಲ್ಕ್ ಫ್ಲೋ ಮೀಟರ್ ಅಳವಡಿಕೆ ಕಾಮಗಾರಿ ಹಾಗೂ ಮನಪಾ ವತಿಯಿಂದ 900 ಎಂ.ಎಂ ವ್ಯಾಸದ ಕೊಳವೆಯನ್ನು ಕೆ ಐಒಸಿಎಲ್ ಎದುರುಗಡೆ ಬದಲಾಯಿಸುವ ಕಾಮಗಾರಿ ಡಿ.6ರಿಂದ ಆರಂಭವಾಗಲಿದೆ.

ಡಿ. 6ರಂದು ಬೆಳಗ್ಗೆ 6 ಗಂಟೆಯಿಂದ ಡಿ.8ರ ಬೆಳಗ್ಗೆ 6ವರೆಗಿನ ಅವಧಿಯಲ್ಲಿ ಬೆಂದೂರ್‌ವೆಲ್ ಲೋ ಲೇವೆಲ್ ಪ್ರದೇಶಗಳಾದ ಪಿ.ವಿ.ಎಸ್, ಲೇಡಿಹಿಲ್, ಬಂದರ್ ಹಾಗೂ ಮೇರಿಹಿಲ್, ಪಚ್ಚನಾಡಿ, ಅಶೋಕನಗರ, ದೇರೆಬೈಲ್, ಕೊಡಿಯಾಲ ಬೈಲ್, ಕದ್ರಿ, ನಾಗೂರಿ, ಸುರತ್ಕಲ್, ಕಾಟಿಪಳ್ಳ, ಕೂಳೂರು, ಜಲ್ಲಿಗುಡ್ಡೆ, ಕೋಡಿಕಲ್ ಭಾಗಶಃ ಕಾನ, ಬಾಳ, ಕುಳಾಯಿ, ಮುಕ್ಕ, ಪಣಂಬೂರು ಇತ್ಯಾದಿ ಪ್ರದೇಶಗಳಿಗೆ ಸಂಪೂರ್ಣವಾಗಿ ನೀರು ನಿಲುಗಡೆಗೊಳಿಸಲಾಗುವುದರಿಂದ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಹಾನಗರ ಪಾಲಿಕೆ ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News