ಆಲ್‌ಝೈಮರ್ ಚಿಕಿತ್ಸಾ ತಂತ್ರಜ್ಞಾನ ಕುರಿತ ಸಂಶೋಧನೆಗಾಗಿ ಮಂಗಳೂರಿನ ಸಲ್ವಾಗೆ ಪಿ ಎಚ್‌ ಡಿ ಪದವಿ

Update: 2024-11-13 17:00 GMT

ಸಲ್ವಾ

ಮಂಗಳೂರು : ಮೆದುಳಿನ ಅಸ್ವಸ್ಥತೆ ಆಲ್‌ಝೈಮರ್ ಕಾಯಿಲೆ(ಎಡಿ) ಚಿಕಿತ್ಸಾ ತಂತ್ರಜ್ಞಾನ ಕುರಿತ ಸಂಶೋಧನೆಗಾಗಿ ಮಂಗಳೂರಿನ ಸಲ್ವಾ ಅವರು ಪಿ ಎಚ್‌ ಡಿ ಪಡೆದುಕೊಂಡಿದ್ದಾರೆ. ಅವರು ಮಾಡಿರುವ ಸಂಶೋಧನೆಯು ಆಲ್‌ಝೈಮರ್ ಕಾಯಿಲೆ ಚಿಕಿತ್ಸೆ ವಿಚಾರದಲ್ಲಿ ಹೊಸ ಮೈಲಿಗಲ್ಲಾಗಿದೆ.

ಡಾ. ಸಲ್ವಾ ಆಲ್‌ಝೈಮರ್ ಔಷಧಿಗಳನ್ನು ಬಾಯಿಯ ಮೂಲಕ ನೀಡಲು ಮೇದಸ್ಸು ಜನ್ಯ ನ್ಯಾನೊ-ವಾಹಕಗಳ ಅಭಿವೃದ್ಧಿ ಕುರಿತು (developing lipid nano-carriers for oral delivery of an anti-Alzheimer’s drug) ಔಷಧೀಯ ವಿಜ್ಞಾನದ ವಿಶೇಷ ಕ್ಷೇತ್ರದಲ್ಲಿ ಸಂಶೋಧನೆ ಮಾಡಿದ್ದಾರೆ.

ಮಣಿಪಾಲ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ಮತ್ತು ಮಣಿಪಾಲ್ ಹೈಯ್ಯರ್ ಎಜ್ಯುಕೇಶನ್ ಅಕಾಡೆಮಿಯ ಫಾರ್ಮಾಸ್ಯುಟಿಕ್ಸ್‌ನ ಮಾಜಿ ಸಹಾಯಕ ಪ್ರಾಧ್ಯಾಪಕ ಡಾ. ಲಲಿತ್ ಕುಮಾರ್ ಮತ್ತು ಔಷಧ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಸಿ. ಮಲ್ಲಿಕಾರ್ಜುನ ರಾವ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡಿದ್ದಾರೆ.

ದಿವಂಗತ ಅಬ್ದುಲ್ ಸಮದ್ ಮತ್ತು ಸಾಹಿರಾ ಬಾನು ಪುತ್ರಿಯಾದ ಯುವ ಸಂಶೋಧಕರಾದ ಸಲ್ವಾ ಅವರು ಗ್ರಾಜುಯೇಟ್ ಫಾರ್ಮಸಿ ಆಪ್ಟಿಟ್ಯೂಡ್ ಟೆಸ್ಟ್ (GPAT)ನಲ್ಲಿ ರಾಷ್ಟ್ರಮಟ್ಟದಲ್ಲಿ 724 ರ‍್ಯಾಂಕ್‌ ನೊಂದಿಗೆ ತೇರ್ಗಡೆಯಾಗಿದ್ದರು. ಈ ಮೂಲಕ ಅವರಿಗೆ ಸ್ನಾತಕೋತ್ತರ ಅಧ್ಯಯನಕ್ಕಾಗಿ ಫೆಲೋಶಿಪ್ ಸಿಕ್ಕಿತ್ತು. ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್(AICTA) ನಿಂದ ಪ್ರತಿಷ್ಠಿತ ರಾಷ್ಟ್ರೀಯ ಡಾಕ್ಟರಲ್ ಫೆಲೋಶಿಪ್(NDF) ಪಡೆದುಕೊಂಡಿದ್ದಾರೆ. ಸಲ್ವಾ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ICMR), ಟೊರೊಂಟೊ ವಿಶ್ವವಿದ್ಯಾನಿಲಯ ಮತ್ತು ಇಂಟರ್ನ್ಯಾಷನಲ್ ಬ್ರೈನ್ ರಿಸರ್ಚ್ ಆರ್ಗನೈಸೇಶನ್ (IBRO) ನಿಂದ ಸಂಶೋಧನಾ ಅನುದಾನ ಪಡೆದುಕೊಂಡಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News