ಮಾಣಿ : ಕೋಕ್ ಸಾಗಾಟದ ಲಾರಿ ಪಲ್ಟಿ; ಡ್ರೈವರ್, ಕ್ಲೀನರ್ ಅಪಾಯದಿಂದ ಪಾರು
Update: 2023-08-01 03:03 GMT
ಮಾಣಿ: ಮಂಗಳೂರಿನಿಂದ ಹಾಸನಕ್ಕೆ ಕೋಕ್ ಸಾಗಿಸುತ್ತಿದ್ದ ಲಾರಿ ಮಂಗಳವಾರ ಬೆಳಗಿನ ಜಾವ ರಸ್ತೆ ಬದಿಯ ತೋಟಕ್ಕೆ ಪಲ್ಟಿಯಾಗಿರುವ ಘಟನೆ ಹಳೀರ ಬಳಿ ನಡೆದಿದೆ.
ಅತೀವೇಗವೇ ಈ ಲಾರಿ ಪಲ್ಟಿ ಹೊಡೆಯಲು ಕಾರಣವೆನ್ನಲಾಗಿದ್ದು, ಡ್ರೈವರ್ ಮತ್ತು ಕ್ಲೀನರ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಫ್ಲೈಓವರ್ ಮತ್ತು ಅಂಡರ್ ಪಾಸ್ ನಿರ್ಮಿಸುವ ಕಡೆಗಳಲ್ಲಿ ತೀರಾ ಕಳಪೆ ಗುಣಮಟ್ಟದ ಮತ್ತು ಅಪಾಯಕಾರಿಯಾದ ತಾತ್ಕಾಲಿಕ ರಸ್ತೆಗಳನ್ನು ಗುತ್ತಿಗೆದಾರರು ನಿರ್ಮಿಸಿಕೊಡುವುದರಿಂದ ಅಪಘಾತಗಳು ಹೆಚ್ಚುತ್ತಲೇ ಇದೆ ,ಇಕ್ಕಟ್ಟಾದ ಏಕಮುಖ ಸಂಚಾರ ನಡೆಸಲು ಅಷ್ಟೇ ಸ್ಥಳವಿರುವ ಈ ರಸ್ತೆಯಲ್ಲಿ ದ್ವಿಪಥ ಸಂಚಾರ ಮಾಡಬೇಕಾಗಿದ್ದು, ನಿಯಮ ಪಾಲಿಸದ ಗುತ್ತಿಗೆದಾರರಿಗೆ ಶಾಪ ಹಾಕುತ್ತಲೇ ವಾಹನ ಸವಾರರು ಈ ರಸ್ತೆಗಳಲ್ಲಿ ದಿನಂಪ್ರತಿ ಸಾಗುತ್ತಿದ್ದಾರೆ.