ಮಾಣಿ: ಮೇಲ್ಸೇತುವೆ ಕಾಮಗಾರಿಗೆ ತಂದಿಟ್ಟಿದ್ದ ಸಾಮಗ್ರಿಗಳು ಕಳವು

Update: 2023-08-08 08:17 GMT

ಮಾಣಿ: ಮೇಲ್ಸೇತುವೆ ಕಾಮಗಾರಿಗೆ ತಂದಿಟ್ಟಿದ್ದ ರಾಡುಗಳು, ಪ್ಲೇಟ್ಸ್ ಹಾಗೂ ಇತರ ಸಾಮಗ್ರಿಗಳು ಕಳ್ಳತನವಾಗಿರುವ ಬಗ್ಗೆ  ವರದಿಯಾಗಿದೆ.

ಬಂಟ್ವಾಳ ಬಿ ಮೂಡ ಗ್ರಾಮದ ನಿವಾಸಿ, ಕೆ.ಎನ್.ಆರ್ ಕನ್ಸ್ಟ್ರಕ್ಷನ್ ಕಂಪೆನಿಯಲ್ಲಿ ಪಿ.ಆರ್.ಒ ಆಗಿ ಕೆಲಸ ನಿರ್ವಹಿಸುತ್ತಿರುವ ಆರ್. ನಂದಕುಮಾರ್ ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಬಂಟ್ವಾಳ ತಾಲೂಕು ಮಾಣಿ ಎಂಬಲ್ಲಿ ಬ್ರಿಡ್ಜ್ ಕೆಲಸ ಮಾಡಲು ತಂದು ಇಟ್ಟಿದ್ದ ರಾಡುಗಳು, ಪ್ಲೇಟ್ಸ್ ಹಾಗೂ ಇತರ ಸಾಮಾಗ್ರಿಗಳು ಆ.7 ರಂದು ನೋಡಿದಾಗ ಕಳ್ಳತನವಾಗಿದ್ದು, ಸಾಮಾಗ್ರಿಗಳನ್ನು ಹುಡುಕಾಡಿದಾಗ ಮಾಣಿ ಗ್ರಾಮದ ಪಟ್ಲಕೋಡಿ ಎಂಬಲ್ಲಿ ಈಚರ್ ವಾಹನದಲ್ಲಿ ವ್ಯಕ್ತಿಯೋರ್ವ ತುಂಬಿಸಿಕೊಂಡಿರುವುದು ಕಂಡು ಬಂದಿದ್ದು, ನಂದಕುಮಾರ್ ಕಂಡ ಆರೋಪಿ ವಾಹನವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ.

 5 ಟನ್ ತೂಕದ ಸಾಮಾಗ್ರಿಗಳು ಕಳ್ಳತನವಾಗಿದ್ದು, ವಸ್ತುಗಳ ಮೌಲ್ಯ ಸುಮಾರು 3,50,000/- ರೂ ಆಗಿರಬಹುದು ಎಂದು ಅಂದಾಜಿಸಲಾಗಿದೆ. 

ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 138/2023 ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News