ಮಂಜನಾಡಿ | ಗ್ಯಾಸ್ ಸ್ಫೋಟ ಪ್ರಕರಣ: ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತ್ಯು

Update: 2024-12-13 02:07 GMT

ಉಳ್ಳಾಲ: ಮಂಜನಾಡಿ ಗ್ರಾಮ ವ್ಯಾಪ್ತಿಯ ಕಲ್ಕಟ್ಟ ಖಂಡಿಕ ಎಂಬಲ್ಲಿ ಗ್ಯಾಸ್ ಸೋರಿಕೆ ಪರಿಣಾಮ ಬೆಂಕಿ ಹಿಡಿದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮೂವರು ಮಕ್ಕಳ ತಾಯಿ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ತಡರಾತ್ರಿ ಮೃತಪಟ್ಟಿದ್ದಾರೆ.

ಖಂಡಿಕ ನಿವಾಸಿ ಮುತ್ತಲಿಬ್ ಎಂಬವರ ಪತ್ನಿ ಖುಬ್ರ ಮತ್ತು ಮೂವರು ಮಕ್ಕಳು ಒಂದೇ ಕೊಠಡಿಯಲ್ಲಿ ಕಳೆದ ಶನಿವಾರ ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಗ್ಯಾಸ್ ಸೋರಿಕೆ ಯಿಂದ ಈ ದುರಂತ ಸಂಭವಿಸಿತ್ತು.ಇದರಿಂದ ಮನೆಯೊಡತಿ ಖುಬ್ರಾ ಹಾಗೂ ಅವರ ಮೂವರು ಮಕ್ಕಳಾದ ಮಹದಿಯಾ,ಮಝಿಯಾ,ಮಾಯಿಝಾ ಗಂಭೀರ ಗಾಯಗೊಂಡಿದ್ದರು.

 ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಮನೆಯೊಡತಿ ಖುಬ್ರಾ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ತಡರಾತ್ರಿ ಮೃತಪಟ್ಟಿದ್ದಾರೆ. ಅವರ ಮೃತದೇಹದ ಅಂತ್ಯ ಸಂಸ್ಕಾರ ಕಲ್ಕಟ್ಟ ಖಂಡಿಕ ಮನೆಯಲ್ಲಿ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News