ಮೆಸ್ಕಾಂ: ದೂರುಗಳನ್ನು ಸ್ವೀಕರಿಸಲು ಹೆಚ್ಚುವರಿಯಾಗಿ 56 ಮ೦ದಿಯ ವಿಶೇಷ ಪಡೆ

Update: 2024-06-30 14:37 GMT

ಮ೦ಗಳೂರು: ಮೆಸ್ಕಾಂನಲ್ಲಿ ದೂರುಗಳನ್ನು ಸ್ವೀಕರಿಸಲು ಮತ್ತೆ ಹೆಚ್ಚುವರಿಯಾಗಿ 56 ಮ೦ದಿಯ ವಿಶೇಷ ಪಡೆ ಮಂಜೂರು ಮಾಡಲಾಗಿದೆ.

ಮಳೆಗಾಲದ ಸಂಭವನೀಯ ಅವಘಡಗಳನ್ನು ತಪ್ಪಿಸುವ ಸಲುವಾಗಿ ಮೆಸ್ಕಾಂ ವತಿಯಿಂದ ಈಗಾಲೇ 800 ಗ್ಯಾಂಗ್ ಮೆನ್ ಮತ್ತು 56 ವಿಶೇಷ ವಾಹನಗಳು ಕಾರ್ಯನಿರ್ವಹಿಸುತ್ತಿವೆ. ಇದೀಗ ಮತ್ತೆ ಹೆಚ್ಚುವರಿಯಾಗಿ 56 ಮ೦ದಿಯ ವಿಶೇಷ ಪಡೆ ಮ೦ಜೂರು ಮಾಡಲಾಗಿದೆ. ವಿಶೇಷ ಪಡೆ ಅತ್ತಾವರ 4, ಕಾವೂರು 10, ಪುತ್ತೂರು‌ 10, ಬಂಟ್ವಾಳ 7, ಉಡುಪಿ 2, ಕಾರ್ಕಳ 4, ಕುಂದಾಪುರ 8, ಶಿವಮೊಗ್ಗ 8, ಶಿಕಾರಿಪುರ 3 ಮ೦ದಿಯನ್ನು ಒಳಗೊ೦ಡಿದೆ.

ಮಳೆಗಾಲದ ಸಂಭವನೀಯ ಅವಘಡಗಳನ್ನು ತಪ್ಪಿಸುವ ಸಲುವಾಗಿ ಮೆಸ್ಕಾಂ ವತಿಯಿಂದ ಈಗಾಲೇ 800 ಗ್ಯಾಂಗ್ ಮೆನ್ ಮತ್ತು 56 ಸಂಖ್ಯೆಯ ವಿಶೇಷ ವಾಹನಗಳು ಕಾರ್ಯನಿರ್ವಹಿಸುತ್ತಿವೆ.

ಮೆಸ್ಕಾಂನಾದ್ಯಂತ ಅಪಾಯಕಾರಿ ಸ್ಥಳಗಳನ್ನು ಪತ್ತೆಮಾಡಿ ಕ್ರಮಬದ್ಧ ಗೊಳಿಸಲು ವಿಶೇಷ ಅಭಿಯಾನ ವನ್ನು ಕೈಗೆತ್ತಿಕೊಳ್ಳಲಾಗಿದೆ. ವಿಧಾನಸಭಾ ಅಧ್ಯಕ್ಷರ ಸೂಚನೆ ಮೇರೆಗೆ, ಅಪಾಯಕಾರಿ ಸನ್ನಿವೇಶಗಳ ಮಾಹಿತಿ ಸ್ವೀಕರಿಸುವುದಕ್ಕೋಸ್ಕರ ಎರಡು ಮೀಸಲಾದ ದೂರವಾಣಿ ಗಳನ್ನು ಸ್ಥಾಪಿಸಲಾಗುವುದು. ಅವು ಸೋಮವಾರದಿಂದ ಕಾರ್ಯಾರಂಭ ಮಾಡಲಿವೆ. ಇದಲ್ಲದೆ 64 ಉಪವಿಭಾಗಗಳಲ್ಲಿಯೂ 24*7 ಸೇವಕೇಂದ್ರಗಳು ಗ್ರಾಹಕರ ದೂರುಗಳನ್ನು ಸ್ವೀಕರಿಸಿ ,ಸರಿಪಡಿಸಲು ಕಾರ್ಯಾಚರಿಸುತ್ತಿವೆ.

ಗ್ರಾಹಕರು ತುರ್ತು ಸಂದರ್ಭಗಳಲ್ಲಿ ಮೆಸ್ಕಾಂ ಸಹಾಯವಾಣಿ 1912 ಗೆ ಕರೆಮಾಡಬಹುದಾಗಿದೆ. ಅಲ್ಲದೆ ಮೆಸ್ಕಾಂ ಫೇಸ್ ಬುಕ್‌, ಎಕ್ಸ್, ವಾಟ್ಸಾಪ್‌ ನ೦ಬ್ರ-9483041912, ವೆಬ್ ಸೈಟ್ ಹಾಗು ಸೇವಾ ಸಿಂಧು ಮೂಲಕವೂ ಮೆಸ್ಕಾಂ ನ್ನು ತಲುಪಬಹುದಾಗಿದೆ.ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News