ಮೂಡುಬಿದಿರೆ: ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ -2023 ಗೆ ಚಾಲನೆ

Update: 2023-09-09 13:48 GMT

ಮೂಡುಬಿದಿರೆ: ಇಲ್ಲಿನ ಶೋರಿನ್ ರಿಯೋ ಕರಾಟೆ ಅಸೋಸಿಯೇಶನ್ ಆಶ್ರಯದಲ್ಲಿ ಇಲ್ಲಿನ ಸ್ವಾಮೀಸ್ ಸ್ಟ್ರೆಂಥ್ ಟ್ರೈನಿಂಗ್ ಎಂ.ಕೆ .ಅನಂತ್ರಾಜ್ ದೈಹಿಕ ಶಿಕ್ಷಣ ಕಾಲೇಜು ಸಹಯೋಗದೊಂದಿಗೆ 20ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಪ್ ಶನಿವಾರ ಸಮಾಜ ಮಂದಿರದಲ್ಲಿ ನಡೆಯಿತು.

ಮಾಜಿ‌ ಸಚಿವ ಕೆ.ಅಭಯಚಂದ್ರ ಜೈನ್ ಚಾಲನೆ ನೀಡಿ, ಶುಭ ಹಾರೈಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಆತ್ಮರಕ್ಷಣೆಗೋಸ್ಕರ ಯಾವುದೇ ಆಯುಧ ಗಳನ್ನು ಬಳಸಿಕೊಳ್ಳದೆ ಸಾಹಸದ ಸಮರ ಕಲೆ ಕರಾಟೆ. ಆತ್ಮರಕ್ಷಣೆಯ ಜತೆಗೆ ಮನಸಿಗೆ ಏಕಾಗ್ರತೆಯನ್ನು, ಮಾನಸಿಕವಾಗಿ, ಶಾರೀರಿಕವಾಗಿ ಒಬ್ಬ ವ್ಯಕ್ತಿ ಸದೃಢವಾಗಿ ಬೆಳೆಯಲು ಕರಾಟೆ ಸಹಕಾರಿಯಾಗುತ್ತದೆ. ಯಾವುದೇ ಓರ್ವ ವ್ಯಕ್ತಿಯನ್ನು ಪರಿಪೂರ್ಣವಾಗಿ ಗಟ್ಟಿಗೊಳಿಸುವಂತಹ ಕೆಲಸಗಳಿಗೆ ಪ್ರೋತ್ಸಾಹ ಸಿಗುವುದು ಕಡಿಮೆ ಆದರೆ ಸಂಘಟಕ ನದೀಮ್ ಅವರು ತಾನು ಕಲಿತ ಕಲೆಯನ್ನು ಆತ್ಮವಿಶ್ವಾಸದೊಂದಿಗೆ ಇನ್ನೊಬ್ಬರಿಗೆ ಪಸರಿಸುವ ಮೂಲಕ ಸಮಾಜದಲ್ಲಿ ಬದಲಾವಣೆ ತರಬೇಕೆಂಬ ಇಚ್ಛೆಯನ್ನು ಹೊಂದಿದ್ದಾರೆ ಎಂದು ಹೇಳಿದರು.

ಉದ್ಯಮಿ ಅಬುಲ್ ಅಲಾ ಪುತ್ತಿಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಅಮಲು ಪದಾರ್ಥ ಗಳಿಗೆ ಬಲಿಯಾಗದೆ ಇಂತಹ‌ ಸಾಹಸಮಯ ಕಲೆಯಾದ ಕರಾಟೆಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸುವಂತೆ ಆಗಬೇಕೆಂದರು.

ಪುರಸಭಾ ನಿರ್ಗಮನ ಅಧ್ಯಕ್ಷ ಪ್ರಸಾದ್ ಕುಮಾರ್, ಮೊಹಮ್ಮದ್ ಶರೀಫ್, ರಾಜ್ಯ ಕರಾಟೆ ಶಿಕ್ಷಕರ ಸಂಘದ ಕೋಶಾಧಿ ಕಾರಿ ರವಿ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಸತೀಶ್ ಬೆಳ್ಮಣ್, ಉಡುಪಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ಕಿರಣ್ ಕುಂದಾಪುರ, ಕಾರ್ಯದರ್ಶಿ ರೋಹಿತಾಕ್ಷ ಉಡುಪಿ, ಕೋಶಾಧಿಕಾರಿ ವಾಮನ್ ಪಲನ್, ಉದ್ಯಮಿ ಅರುಣ್ ಕುಮಾರ್ ನಿಟ್ಟೆ, ರಾಷ್ಟ್ರೀಯ ಕರಾಟೆ ತರಬೇತುದಾರ ಸ್ವಾಮಿ ಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಘಟಕ ನದೀಮ್ ಸ್ವಾಗತಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News