ಮುಡಿಪು: ಯುವತಿ ನಾಪತ್ತೆ

Update: 2024-09-19 17:54 GMT

ಕೊಣಾಜೆ: ಮುಡಿಪು ಪ್ರಜ್ಞಾ ಸ್ವಾಧಾರ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಯುವತಿಯೊಬ್ಬಳು ನಾಪತ್ತೆಯಾಗಿದ್ದು, ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಪತ್ತೆಯಾಗಿರುವ ಯುವತಿಯನ್ನು ಪಶ್ಚಿಮ ಬಂಗಾಳ ಮೂಲದ ಜುಲೇಖಾ ಖಾಟೂನ್ (22) ಎಂದು ಗುರುತಿಸಲಾಗಿದೆ.

4 ವರ್ಷಗಳ ಹಿಂದೆ ಭಿಕ್ಷಾಟನೆ ಪ್ರಕರಣದಲ್ಲಿ ಸಿಕ್ಕಿದ್ದ ಈಕೆ ಮನೆಯವರು ಪತ್ತೆಯಾಗದೇ ಇರುವುದರಿಂದ ಮೇಲಾಧಿಕಾರಿಗಳ ಆದೇಶದಂತೆ 2024 ನೇ ಮಾರ್ಚ್ ತಿಂಗಳಲ್ಲಿ ಭೂಮಿ ಸಂಸ್ಥೆಗೆ ಕಳುಹಿಸಿಕೊಡಲಾಗಿತ್ತು. ಏಪ್ರಿಲ್ 18 ರಂದು ಅಲ್ಲಿಂದ ಕಾಣೆಯಾಗಿದ್ದ ಬಳಿಕ ಆಕೆಯನ್ನು ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಪತ್ತೆ ಹಚ್ಚಿ ಮುಡಿಪು ಪ್ರಜ್ಞಾ ಸ್ವಾಧಾರ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದರು.

ಮುಡಿಪು ಕೇಂದ್ರದಲ್ಲಿದ್ದ 4 ಮಕ್ಕಳನ್ನು ಕುರ್ನಾಡು ಅಂಗನವಾಡಿಗೆ ಬಿಟ್ಟು ಕರೆದುಕೊಂಡು ಬರಲು ಆಕೆಯೇ ಹೋಗಿ ಬರುತ್ತಿದ್ದು, ಎಂದಿನಂತೆ ಸೆ.19 ರಂದು ಮಧ್ಯಾಹ್ನ 2.45 ಗಂಟೆಗೆ ಮಕ್ಕಳನ್ನು ಕರೆದುಕೊಂಡು ಬರಲೆಂದು ಅಂಗನವಾಡಿಗೆ ಹೋದವಳು ಅಲ್ಲಿಗೂ ಹೋಗದೆ ಮತ್ತೆ ಕೇಂದ್ರಕ್ಕೂ ವಾಪಸ್ಸು ಬಂದಿರಲಿಲ್ಲ ಎಂದು ದೂರಲಾಗಿದೆ.

ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News