ಮುಕ್ಕದಿಂದ ತಣ್ಣೀರುವಾವಿ ಸಮುದ್ರ ತೀರ ಸ್ವಚ್ಛತಾ ಅಭಿಯಾನ
Update: 2023-09-17 19:41 IST

ಮಂಗಳೂರು, ಸೆ.17: ‘ಸ್ವಚ್ಚ ಸಾಗರ-ಸುರಕ್ಷಿತ ಸಾಗರ’ ಅಭಿಯಾನದಡಿ ಪರ್ಯಾವರಣ ಸಂರಕ್ಷಣ ಗತಿ ವಿಧಿ ಮತ್ತು ಕರಾವಳಿ ಕಲ್ಯಾಣ ಪರಿಷತ್ತು ಕರ್ನಾಟಕ ಇದರ ಸಂಯೋಜನೆಯಲ್ಲಿ ಮುಕ್ಕ, ಎನ್‌ಐಟಿಕೆ, ದೊಡ್ಡಕೊಪ್ಲ, ಗುಡ್ಡೆಕೊಪ್ಲ, ಇಡ್ಯ, ಹೊಸಬೆಟ್ಟು, ಚಿತ್ರಾಪುರ, ಮೀನಕಳಿಯ, ತಣ್ಣೀರುಬಾವಿ ಸಮುದ್ರ ತೀರ ಸ್ವಚ್ಛ ಕಾರ್ಯಕ್ರಮವು ರವಿವಾರ ನಡೆಯಿತು.
ರೋಟರಿ,ಲಯನ್ಸ್, ಎನ್‌ಸಿಸಿ, ಎನ್ನೆಸ್ಸೆಸ್, ಶಾಲಾ ಕಾಲೇಜು ವಿದ್ಯಾರ್ಥಿಗಳು ಜೊತೆಗೂಡಿ ನಡೆಸಲಾದ ಸ್ವಚ್ಛ ಅಭಿಯಾನದಲ್ಲಿ ಕೋಸ್ಟ್‌ಗಾರ್ಡ್, ಮೊಗವೀರ ಸಂಘಟನೆಗಳು, ಸಂಘ ಸಂಸ್ಥೆಯ ಸದಸ್ಯರ ಸಹಿತ 2000ಕ್ಕೂ ಅಧಿಕ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಪರ್ಯಾವರಣ ಸಂರಕ್ಷಣ ಮಂಗಳೂರು ಮಹಾನಗರ ಸಂಯೋಜಕ ನ್ಯಾಯವಾದಿ ಸತೀಶ ಮತ್ತಿತರರು ಸಾಥ್ ನೀಡಿದರು.
ಪರ್ಯಾವರಣ ಗತಿ ವಿಧಿಯ ರಾಜ್ಯ ಸಂಯೋಜಕ ಜಯರಾಮ್ ಬೊಳ್ಳಾಜೆ ಸಾಗರದ ಸುರಕ್ಷೆ ಕುರಿತು ಮಾಹಿತಿ ನೀಡಿದರು.