ಶಟ್ಲ್ ಬ್ಯಾಡ್ಮಿಂಟನ್ ಬೇಸಿಗೆ ತರಬೇತಿ ಶಿಬಿರ ಉದ್ಘಾಟನೆ

ಮಂಗಳೂರು: ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ಅಸೋಸಿಯೇಶನ್ , ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಶನ್ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ಯು.ಎಸ್.ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಶಟ್ಲ್ ಬ್ಯಾಡ್ಮಿಂಟನ್ ಬೇಸಿಗೆ ತರಬೇತಿ ಶಿಬಿರ ಸೋಮವಾರ ಉದ್ಘಾಟನೆಗೊಂಡಿತು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರಾದ ಪ್ರದೀಪ್ ಡಿ' ಸೋಜಾ , ಕರ್ನಾಟಕ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪ್ರಶಸ್ತಿ ವಿಜೇತ ಅಂತರ ರಾಷ್ಟ್ರೀಯ ಕ್ರೀಡಾ ಪಟು ಅಶೋಕ ಪೂವಯ್ಯ, ಮಂಗಳಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಶಿವಪ್ರಸಾದ್ ಪ್ರಭು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಅಸೋಸಿಯೇಶನ್ ಕಾರ್ಯ ದರ್ಶಿ ಸುಪ್ರೀತ್ ಆಳ್ವ ಸ್ವಾಗತಿಸಿದರು. ಅಸೋಸಿಯೇಶನ್ ಅಧ್ಯಕ್ಷ ಸಂತೋಷ ಕುಮಾರ್ ಶೆಟ್ಟಿ ಪ್ರಾಸ್ತಾ ವಿಕ ಭಾಷಣ ಮಾಡಿದರು. ಸಮಿತಿಯ ಸದಸ್ಯರಾದ ರಯೀಝ್ ಪಿ.ಸಿ.ಕಾರ್ಯಕ್ರಮ ನಿರ್ವಹಿಸಿದರು. ತರಬೇತಿದಾರರಾದ ಚೇತನ್ ರಾಜ್, ಗಣೇಶ್ ಕುಡ್ವ ಮತ್ತು ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಅಸೋಸಿಯೇಶನ್ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.