ಎ.16ರಿಂದ ಅರಳು-2025 ರಂಗಭೂಮಿ ಕಾರ್ಯಾಗಾರ

Update: 2025-04-07 22:06 IST
ಎ.16ರಿಂದ ಅರಳು-2025 ರಂಗಭೂಮಿ ಕಾರ್ಯಾಗಾರ
  • whatsapp icon

ಮಂಗಳೂರು, ಎ. 7: ‘ಕಲಾಭಿ’ ಕಲಾ ಸಂಸ್ಥೆ ಮತ್ತು ಕೆನರಾ ಕಲ್ಚರಲ್ ಅಕಾಡೆಮಿ ವತಿಯಿಂದ ಅರಳು-2025 ರಂಗಭೂಮಿ ಕಾರ್ಯಾಗಾರ ಎ. 16ರಿಂದ 27ರವರೆಗೆ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಕೊಡಿಯಾಲ್‌ಬೈಲ್‌ನ ಕೆನರಾ ಇಂಗ್ಲಿಷ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ ಎಂದು ಕೆನರಾ ಕಲ್ಚರಲ್ ಅಕಾಡೆಮಿಯ ಸಂಚಾಲಕ ಉಜ್ವಲ್ ಯು.ವಿ. ಹೇಳಿದರು.

ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಎ. 16ರಂದು ಬೆಳಗ್ಗೆ 9ಕ್ಕೆ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‌ಬೈಲ್ ಅವರು ಕಾರ್ಯಾಗಾರ ಉದ್ಘಾಟಿಸಲಿದ್ದಾರೆ. 9ರಿಂದ 17 ವರ್ಷದೊಳಗಿನ ಮಕ್ಕಳಿಗೆ ಕಾರ್ಯಾಗಾರದಲ್ಲಿ ಭಾಗವಹಿಸಲು ಅವಕಾಶವಿದೆ. ಯುವ ನಿರ್ದೇಶಕಿ ಹಾಗೂ ನೀನಾಸಂ ಪದವಿಧರರಾದ ಇಂದು ಡಿ., ಚೇತನ್ ಗಣೇಶಪುರ ಸೇರಿದಂತೆ ರಂಗಶಿಕ್ಷಣ ಪಡೆದ ರಾಜ್ಯದ ವಿವಿಧ ಭಾಗದ ಪ್ರತಿಭಾನ್ವಿತ ಯುವ ನಿರ್ದೇಶಕರು ಕಾರ್ಯಾಗಾರದಲ್ಲಿ ಮಕ್ಕಳಿಗೆ ತರಬೇತಿ ನೀಡಲಿದ್ದಾರೆ ಎಂದರು.

ಕಾರ್ಯಾಗಾರ ಮುಗಿಯುವ ಒಳಗೆ ಹೊಸ ನಾಟಕಗಳನ್ನು ಕಟ್ಟಲಿದ್ದಾರೆ. ಕಾರ್ಯಗಾರದಲ್ಲಿ ಭಾಗವಹಿ ಸಿದ ಮಕ್ಕಳೇ ಎ. 26, 27ರಂದು ನಾಟಕ ಪ್ರದರ್ಶನ ನೀಡಲಿದ್ದಾರೆ. ಮಕ್ಕಳ ಸೃಜನಶೀಲತೆಯನ್ನು ಪೋಷಿಸಲು, ಕಲ್ಪನೆ, ನಟನಾ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಲು ಅರಳು ಕಾರ್ಯಾಗಾರ ನಡೆಸಲಾಗುತ್ತಿದೆ. ಇದು ಮಕ್ಕಳ ಒಳಗಿನ ಕಲಾವಿದನಿಗೆ ಉತ್ತಮ ವೇದಿಕೆ ಒದಗಿಸುತ್ತದೆ ಎಂದರು.

ಕಲಾಭಿ ಅಧ್ಯಕ್ಷ ಸುರೇಶ್ ವರ್ಕಾಡಿ, ಕಲಾಭಿ ಥಿಯೆಟರ್ ವ್ಯವಸ್ಥಾಪಕಿ ಹರ್ಷಿತಾ ಶಿರೂರು, ಪ್ರಮುಖರಾದ ಭಾವನ ವಿಷ್ಣುಮೂರ್ತಿ ಕೆರೆಮಠ, ಮೀನಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News