ನಾಟೆಕಲ್: ನಾಗರಿಕ ರಕ್ಷಣಾ ವೇದಿಕೆ ವತಿಯಿಂದ "ಸ್ವಚ್ಛ ನಾಟೆಕಲ್" ಅಭಿಯಾನ
ದೇರಳಕಟ್ಟೆ: ನಾಟೆಕಲ್ ನಾಗರಿಕ ರಕ್ಷಣಾ ವೇದಿಕೆ ಇದರ ಆಶ್ರಯದಲ್ಲಿ ಗಾಂಧಿ ಜಯಂತಿ ಆಚರಣೆ ಪ್ರಯುಕ್ತ ಸ್ವಚ್ಛ ನಾಟೆಕಲ್ ಅಭಿಯಾನ ಕಾರ್ಯಕ್ರಮವು ನಾಟೆಕಲ್ ನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಟೆಕಲ್ ನಾಗರಿಕ ರಕ್ಷಣಾ ವೇದಿಕೆ ಇದರ ಅಧ್ಯಕ್ಷ ಹಾಶಿಮ್ ಬಂಡಸಾಲೆ, ನಮ್ಮ ಆರೋಗ್ಯ ಕಾಪಾಡಲು ಪರಿಸರ ಸ್ವಚ್ಛತೆ ಇರಬೇಕು. ಅದನ್ನು ಮಾಡುವ ಜವಾಬ್ದಾರಿ ನಮ್ಮದು ಎಂದು ಹೇಳಿದರು.
ಮಂಜನಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸರೋಜಿನಿ ಮಾತನಾಡಿ, ಸ್ವಚ್ಛತೆಯ ಅಗತ್ಯತೆ ಮತ್ತು ಸಮಾಜದ ಜಾಗೃತಿ ಬಗೆ ವಿವರಿಸಿದರು.
ಮಂಜನಾಡಿ ಗ್ರಾಮ ಪಂಚಾಯತ್ ಸದಸ್ಯ ಅಬ್ಬಾಸ್ ಉರುಮಣೆ, ನಾಟೆಕಲ್ ರಕ್ಷಣಾ ವೇದಿಕೆ ಉಪಾಧ್ಯಕ್ಷ ಅಬೂಬಕ್ಕರ್ ಹಾಜಿ ನಾಟೆಕಲ್, ಬಿ.ಎಂ.ಇಕ್ಬಾಲ್ ಮಾತನಾಡಿ ಶ್ಲಾಘನೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಅಬ್ದುಲ್ ರಝಾಕ್ ಶಾಲಿಮಾರ್, ಖಲೀಲ್ ಶೈನ್ ನಾಟೆಕಲ್, ಅಶ್ರಫ್ ಗರಡಿ , ಶಾಹುಲ್ ಹಮೀದ್ ಉರುಮಣೆ , ಶಮೀರ್ ಗ್ರೀನ್ ಬಾಗ್ , ನಾಸೀರ್ ಗರಡಿ, ಸಿದ್ದೀಕ್ ಮುಸ್ಲಿಯಾರ್ ಮತ್ತಿತರರು ಉಪಸ್ಥಿತರಿದ್ದರು