ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಸಮ್ಮೇಳನ ಮನೆಗ್ಮಾ - 2023
ಮಂಗಳೂರು, ಅ.2: ಶ್ರೀನಿವಾಸ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಕಾಮರ್ಸ್ ವಿಭಾಗದ ಆಶ್ರಯದಲ್ಲಿ ಮ್ಯಾನೇಜ್‌ಮೆಂಟ್, ಸಮಾಜ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಇತ್ತೀಚಿನ ಪ್ರವೃತ್ತಿಗಳ ಬಗ್ಗೆ ರಾಷ್ಟ್ರೀಯ ಸಮ್ಮೇಳನ ಮನೆಗ್ಮಾ - 2023 ಪಾಂಡೇಶ್ವರದಲ್ಲಿರುವ ಶ್ರೀನಿವಾಸ ವಿವಿಯ ಸಿಟಿ ಕ್ಯಾಂಪಸ್‌ನಲ್ಲಿ ಶನಿವಾರ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಕೆಸಿಸಿಐ ನಿರ್ದೇಶಕ ನಿಸ್ಸಾರ್ ಫಕೀರ್ ಮೊಹಮ್ಮದ್ ಅವರು ಮಾದರಿ ಜಾತ್ಯತೀತ ಶಿಕ್ಷಣದ ಒಳನೋಟಗಳನ್ನು ಹಂಚಿಕೊಂಡರು. ಸಂಶೋಧನಾ ಜ್ಞಾನವನ್ನು ಪ್ರಸಾರ ಮಾಡುವ ಮತ್ತು ಮಾದರಿ ಶಿಕ್ಷಣವನ್ನು ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸುವ ಅಗತ್ಯವನ್ನು ತಿಳಿಸಿದರು.
ಎ .ಶ್ಯಾಮರಾವ್ ಪ್ರತಿಷ್ಠಾನದ ಅಧ್ಯಕ್ಷ ಮತ್ತು ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಸಿಎ ಎ.ರಾಘವೇಂದ್ರ ರಾವ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮನೆಗ್ಮಾ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡರು. ಶ್ರೀನಿವಾಸ ವಿಶ್ವವಿದ್ಯಾಲಯದ ಸಂಶೋಧನಾ ಪ್ರಾಧ್ಯಾಪಕ ಮತ್ತು ಮಾರ್ಗದರ್ಶಿ ಶ್ರೀಪತಿ ಕಲ್ಲೂರಾಯ, ಉಪಕುಲಪತಿ ಡಾ. ಪಿ.ಎಸ್. ಐತಾಳ್ ಮಾತನಾಡಿದರು.
ಡಾ. ಸುಜಯ, ಡಾ. ಕಾವ್ಯಶ್ರೀ, ಡಾ. ಅಮಿತ್ ಮಿನೇಜಸ್, ಡಾ. ಪ್ರಸಾದ್ ಮಹಾಲೆ, ಮತ್ತು ಪ್ರೊ. ಸಾಗರ್ ಉಪಸ್ಥಿತರಿದ್ದರು. ಐಎಂಸಿ ಡೀನ್ ಪ್ರೊ. ವೆಂಕಟೇಶ್ ಅಮೀನ್ ಸ್ವಾಗತಿಸಿದರು. ಬಂದರು, ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ಸ್ ಮ್ಯಾನೇಜ್‌ಮೆಂಟ್‌ನ ಡೀನ್ ಸೋನಿಯಾ ನೊರೊನ್ಹಾ ವಂದಿಸಿದರು. ಎಂಬಿಎ ವಿದ್ಯಾರ್ಥಿ ದೀಪಕ್ ಜೆ. ಕಾರ್ಯಕ್ರಮ ನಿರೂಪಿಸಿದರು.