ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಣೆ

Update: 2024-08-26 14:39 GMT

ಮಂಗಳೂರು : ದಕ್ಷಿಣಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ವಿಭಾಗ ಮತ್ತು ಜಿಲ್ಲಾ ವೆನ್ಲಾಕ್‌ಆಸ್ಪತ್ರೆ ದ.ಕ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ 39ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಣೆ 2024ರ ಕಾರ್ಯಕ್ರಮವು ವೆನ್‌ಲಾಕ್ ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಆರ್‌ ತಿಮ್ಮಯ್ಯ ಮಾತನಾಡಿ, ಮಾನವನ ಸಾವಿನ ನಂತರ ಕಣ್ಣುಗಳು ಸುಟ್ಟು ಬೂದಿಯಾಗುವ ಬದಲು ನೇತ್ರದಾನ ಮೂಲಕ ಇಬ್ಬರು ಅಂಧರಿಗೆ ಬೆಳಕು ನೀಡುವ ಮೂಲಕ ಜೀವ ಸಾರ್ಥಕತೆಯನ್ನು ಪಡೆಯಬೇಕು.ಉಸಿರು ಶಾಶ್ವತವಲ್ಲ ಹೆಸರು ಮಾತ್ರ ಶಾಶ್ವತ. ನಮ್ಮ ಹೆಸರು ಶಾಶ್ವತವಾಗಬೇಕಾದರೆ ನಮ್ಮ ಸಾವಿನ ನಂತರ ಅಂಗಾಂಗದಾನ ಮಾಡಬೇಕು. ನೇತ್ರದಾನ ಮಹಾದಾನವಾಗಿದೆ ಎಂದು ತಿಳಿಸಿದರು.

ವೆನ್‌ಲಾಕ್ ಸ್ಥಾನಿಕ ವೈದ್ಯಾಧಿಕಾರಿ ಡಾ. ಸುಧಾಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ ಪ್ರಾಸ್ತಾವಿಕವಾಗಿ ಮಾತನಾಡಿ 39ನೇ ರಾಷ್ಟ್ರೀಯ ಅಂಧತ್ವ ನೇತ್ರ ದಿನ ಕಾರ್ಯಕ್ರಮದ ಪಾಕ್ಷಿಕ ಆಗಸ್ಟ್ 25ರಂದು ಆರಂಭವಾಗಿ ಸೆ.8 ರವರೆಗೆ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ನೇತ್ರ ದಾನದ ಮಹತ್ವ, ಅರಿವು, ಜಾಗೃತಿಯನ್ನು ಸಮಾಜದಲ್ಲಿ ಮೂಡಿಸಬೇಕಾಗಿದೆ ಎಂದರು.

ಜಿಲ್ಲಾ ವೆನ್ಲಾಕ್‌ಆಸ್ಪತ್ರೆಯ ನೇತ್ರ ತಜ್ಞೆ ಡಾ. ಸೌಮ್ಯ ಅವರು ನೇತ್ರದಾನ ಮಹತ್ವದ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಹಿರಿಯ ನೇತ್ರತಜ್ಞರು ಡಾ. ಅನಿತಾ ಕಿರಣ್ ಹಾಗೂ ಕಚೇರಿ ಸಿಬ್ಬಂದಿ ಮತ್ತು ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಅಧಿಕಾರಿ, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಸುದರ್ಶನ್ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News