ರಾಷ್ಟ್ರೀಯ ಓಪನ್ ರೇಟೆಡ್ ಚೆಸ್ ಪಂದ್ಯಾಟ

Update: 2023-10-12 09:28 GMT

ಮಂಗಳೂರು, ಅ. 12: ರಾಷ್ಟ್ರೀಯ ಓಪನ್/ಕ್ಲಾಸಿಕಲ್ ರೇಟೆಡ್ ಚೆಸ್ ಪಂದ್ಯಾಟ ಅ.17ರಿಂದ 21ರ ತನಕ ಮಂಗಳೂರಿನ ಪುರಭವನದಲ್ಲಿ 9 ರೌಂಡ್ ಗಳಲ್ಲಿ ನಡೆಯಲಿದೆ.

ಸುಮಾರು 20 ವಷ ಗಳ ನಂತರ ನಿರಂತರ 5 ದಿನಗಳ ಪಂದ್ಯಾಟ ಇದಾಗಲಿದೆ ಎಂದು ಪ್ರೆಸ್ ಕ್ಲಬ್ ಲ್ಲಿ ಗುರುವಾರ ದ.ಕ. ಜಿಲ್ಲಾ ಚೆಸ್ ಅಸೋಸಿಯೇಶನ್ ನ ಗೌರವಾಧ್ಯಕ್ಷ ಸುನೀಲ್ ಆಚಾರ್ ತಿಳಿಸಿದರು.

ಜಿಲ್ಲೆಯಲ್ಲಿ ಚೆಸ್ ವೇಗವಾಗಿ ಬೆಳೆಯುತ್ತಿರುವ ಕ್ರೀಡೆಯಾಗಿದ್ದು, ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಆಟಗಾರರನ್ನು ಜಿಲ್ಲೆ ಹೊಂದಿದೆ.ಚೆಸ್ ಆಟದ ಬೆಳವಣಿಗೆಯ ಪೂರಕವಾಗಿ ಪಂದ್ಯಾಟವನ್ನು ಹಮ್ಮಿಕೊಂಡಿದ್ದು, ಇದರಲ್ಲಿ, ಬೇರೆ ಬೇರೆ ರಾಜ್ಯಗಳ ಆಟಗಾರರು ಅಲ್ಲದೇ, ಅಂತಾರಾಷ್ಟ್ರೀಯ ಮಟ್ಟದ ಆಟಗಾರರ ಸಹಿತ ಸುಮಾರು 400 ಆಟಗಾರರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ಮೇಯರ್ ಸುಧೀರ್ ಶೆಟ್ಟಿ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಡಿ.ವೇದವ್ಯಾಸ್ ಕಾಮತ್, ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಕೆಎಸ್ಸಿಎ ಪ್ರಧಾನ ಕಾರ್ಯದರ್ಶಿ ಅರವಿಂದ ಶಾಸ್ತ್ರಿ, ಎಂಆರ್ಪಿಎಲ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ ಮಿಯಾರ್, ಕರ್ನಾಟಕ ಬ್ಯಾಂಕ್ನ ಡಿಜಿಎಂ ಹೇರಳೆ ವಸಂತ ಆರ್. ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಅ.21ರಂದು ಸಮಾರೋಪ ಸಮಾರಂಭದಲ್ಲಿ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ಕೆನರಾ ಬ್ಯಾಂಕ್ ನ ಡಿಜಿಎಂ ಸುಧಾಕರ್ ಕೊಟ್ಟಾರಿ ಭಾಗವಹಿಲಿದ್ದಾರೆ. ಪಂದ್ಯಾಟವು ಆರು ಲಕ್ಷ ರೂ. ನಗದು, ವಿವಿಧ ವಿಬಾಗಗಳಲ್ಲಿ ಟ್ರೋಫಿ ಜೊತೆಗೆ ಸುಮಾರು 200 ಬಹುಮಾನಗಳನ್ನು ಹೊಂದಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ರಮೇಶ್ ಕೋಟೆ, ಉಪಾಧ್ಯಕ್ಷರಾದ ವಾಣಿ ಎಸ್. ಪಣಿಕ್ಕರ್, ಕೋಶಾಧಿಕಾರಿ ಪೂರ್ಣಿಮಾ ಎಸ್. ಆಳ್ವ, ಜತೆ ಕಾರ್ಯದರ್ಶಿ ಸತ್ಯ ಪ್ರಸಾದ್, ಸಹ ಕೋಶಾಧಿಕಾರಿ ರಮ್ಯಾ ಎಸ್. ರೈ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News