ಪುಟಾಣಿಗ ಜೊತೆ ಬೆರೆತ ಮಂಗಳೂರು ಪೊಲೀಸ್ ಕಮಿಷನರ್

Update: 2023-10-05 14:39 GMT

ಮಂಗಳೂರು, ಅ.5: ಸಾಮಾನ್ಯವಾಗಿ ಪೊಲೀಸರು ಅಂದರೆ ಹೆಚ್ಚಿನವರಿಗೆ ಭಯ. ಅದರಲ್ಲೂ ಎಳೆಯ ಮಕ್ಕಳಿಗಂತೂ ಭಯ ತುಸು ಹೆಚ್ಚು ಎನ್ನಬಹುದು. ಹೊಡೆಯುತ್ತಾರೆ, ಬಡಿಯುತ್ತಾರೆ ಎಂಬ ಕಲ್ಪನೆಯೂ ಮಕ್ಕಳಲ್ಲಿರುತ್ತದೆ.

ಈ ಕಲ್ಪನೆಯನ್ನು ದೂರ ಮಾಡಬೇಕಾದರೆ ಪೊಲೀಸ್ ಠಾಣೆಯಲ್ಲಿ ಕೆಲಕಾಲ ಮಕ್ಕಳಿಗೆ ಕಳೆಯುವ, ಲವಲವಿಕೆಯ ವಾತಾವರಣವನ್ನು ಕಲ್ಪಿಸಬೇಕಿದೆ. ಅದನ್ನು ಮನಗಂಡ ನಗರದ ‘ಯುರೋಕಿಡ್ಸ್ ಪ್ರಿ-ಸ್ಕೂಲ್’ನ ಮುಖ್ಯಸ್ಥರು ಕೆಲವು ಪುಟಾಣಿಗಳನ್ನು ಗುರುವಾರ ನಗರದ ಪೊಲೀಸ್ ಆಯುಕ್ತಾಲಯದ ಕಚೇರಿಗೆ ಕರೆದೊಯ್ದು ಆಯುಕ್ತರ ಜೊತೆ ಮುಕ್ತವಾಗಿ ಬೆರೆಯುವ ಅವಕಾಶ ಕಲ್ಪಿಸಿದರು.

ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಕೂಡ ಪುಟ್ಟ ಮಕ್ಕಳ ಜತೆಗೂಡಿ ಒಂದು ಕ್ಷಣ ಪುಟಾಣಿಗಳಾದರು.

ಮಕ್ಕಳ ಜೊತೆ ಮಾತನಾಡುತ್ತಾ, ಸಣ್ಣಪುಟ್ಟ ಪ್ರಶ್ನೆ ಕೇಳುತ್ತಾ ಮಕ್ಕಳ ಮೇಸ್ಟ್ರು ಆಗಿ ಬಿಟ್ಟರು. ನನಗೆ ಟೀಚರ್ ಆಗಬೆಕು, ನನಗೆ ಪೊಲೀಸ್ ಆಫೀಸರ್ ಆಗಬೇಕು ಎಂದೂ ಕೆಲವು ಮಕ್ಕಳು ಹೇಳಿಕೊಂಡರು. ನಂತರ ಮಕ್ಕಳಿಗೆ ಚಾಕಲೇಟ್, ಜ್ಯೂಸ್, ಪೆನ್ಸಿಲ್ ನೀಡಿ ಮಕ್ಕಳನ್ನು ಖುಷಿಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News