ಮಂಗಳೂರು: ಎಕ್ಸ್‌ಪರ್ಟ್ ಮಾಸ್ಟರ್ ಶೆಫ್ ಸ್ಪರ್ಧೆ

Update: 2023-12-10 15:08 GMT

ಮಂಗಳೂರು : ಶುಚಿ, ರುಚಿಯಾದ ಅಡುಗೆ ತಯಾರಿಯು ಕಲೆ ಮತ್ತು ವಿಜ್ಞಾನವಾಗಿದೆ. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಕಲಿಯಬೇಕಾದ ಕೌಶಲಗಳಲ್ಲಿ ಅಡುಗೆ ಕೂಡ ಮುಖ್ಯವಾಗಿದೆ ಎಂದು ಎಕ್ಸ್‌ಪರ್ಟ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ.ನರೇಂದ್ರ ಎಲ್.ನಾಯಕ್ ಹೇಳಿದರು.

ನಗರದ ಕೊಡಿಯಾಲ್‌ಬೈಲ್ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಎಕ್ಸ್‌ಪೋಡಿಯಂನ ಸಭಾಂಗಣದಲ್ಲಿ ರವಿವಾರ ಆಯೋಜಿಸಿದ ಎಕ್ಸ್‌ಪರ್ಟ್ ಮಾಸ್ಟರ್ ಶೆಫ್ ಸ್ಪರ್ಧೆ-2023 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಓಶಿಯನ್ ಪರ್ಲ್‌ನ ಎಕ್ಸಿಕ್ಯೂಟಿವ್ ಶೆಫ್ ದೇವಬೃತ್ ಮಂಡಲ್ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಅತಿಥಿಯಾಗಿ ಎಕ್ಸ್‌ಪರ್ಟ್ ಸಮೂಹ ಸಂಸ್ಥೆಗಳ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್. ನಾಯಕ್,ಎಕ್ಸ್‌ಪರ್ಟ್ ಸಮೂಹ ಸಂಸ್ಥೆಗಳ ಟ್ರಸ್ಟಿ ಉಸ್ತಾದ್ ರಫೀಕ್ ಖಾನ್ ಭಾಗವಹಿಸಿದ್ದರು.

ಈ ಸಂದರ್ಭ ಸ್ಪರ್ಧೆಯ ಪ್ರಾಯೋಜಕ ಸ್ಪೈಸೀಸ್ ಆ್ಯಂಡ್ ಶೆಫ್‌ನ ಮ್ಯಾನೇಜಿಂಗ್ ಡೈರೆಕ್ಟರ್ ದಿನೇಶ್ ಪಿ. ಹಾಗೂ ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಮಚಂದ್ರ ಭಟ್ ಉಪಸ್ಥಿತರಿದ್ದರು.

ಸ್ಪರ್ಧೆಯ ತೀರ್ಪುಗಾರರಾಗಿ ಎಸ್‌ಆರ್‌ಎಂ ಡಿಸ್ಟ್ರಿಬ್ಯೂಶನ್‌ನ ಮನಮೋಹನ್ ಪೈ, ಹೋಮ್ ಬೇಕಿಂಗ್ ಕ್ಷೇತ್ರದ ಅನನ್ಯಾ ಹರೀಶ್, ಮಿಲಾಗ್ರಿಸ್ ಕಾಲೇಜಿನ ಬಿಎಸ್‌ಸಿ ಹಾಸ್ಪಿಟಲಿಟಿ ಸೈನ್ಸ್‌ನ ಎಚ್‌ಒಡಿ ಡೆನ್ಜಿಲ್ ಡಿಕೋಸ್ತಾ, ಸಹ ತೀರ್ಪುಗಾರರಾಗಿ ಅನುರಾಧ ಭಟ್ ಹಾಗೂ ಮಿಲಾಗ್ರಿಸ್ ಕಾಲೇಜಿನ ಉಪನ್ಯಾಸಕ ಅರಿತ್ ಜೋಯೆಲ್ ಪಿಂಟೋ ಸಹಕರಿಸಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News