ಸುರತ್ಕಲ್:‌ ಮಾದಕ ವಸ್ತು ಸೇದುತ್ತಿದ್ದ ಆರೋಪ; ಮೂವರ ಬಂಧನ

Update: 2024-10-03 15:54 GMT

ಸುರತ್ಕಲ್:‌ ಇಲ್ಲಿಗೆ ಸಮೀಪದ ಎನ್.ಐ.ಟಿ.ಕೆ ಕಾಲೇಜ್ ಬಳಿ ಮಾದಕ ವಸ್ತು ಸೇದುತ್ತಿದ್ದ ಆರೋಪದಲ್ಲಿ ಮೂವರನ್ನು ಸುರತ್ಕಲ್‌ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬಿಹಾರ ಮೂಲದ ಪುರುಷೋತ್ತಮ್ ಕುಮಾರ್ (21), ಅದಿತ್ಯ ರಾಜ್ ಕಶ್ಯಫ್ (22), ಸೌರವ್ ಕುಮಾರ್ (24) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಧಿತರು ಅ.1ರಂದು ರಾತ್ರಿ 11:30ರ ಸುಮಾರಿಗೆ ಎನ್.ಐ.ಟಿ.ಕೆ ಕಾಲೇಜು ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 66ರ ಅಂಡರ್ ಪಾಸ್ ನಲ್ಲಿ ದೂಮಪಾನ ಮಾಡುತ್ತಿದ್ದರು. ಅನುಮಾನಗೊಂಡ ಬೀಟ್‌ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ಅವರನ್ನು ಎಜೆ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಅವರು ಅಮಲು ಪದಾರ್ಥ ಸೇವಿಸಿರುವು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.


 

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News