ಸಮಸ್ತದ ಪಾರಂಪರಿಕ ತತ್ವ ಸಂದೇಶಗಳು ಶಾಂತಿ ನೆಲೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ: ಅಲವಿ ದಾರಿಮಿ

Update: 2024-11-04 13:12 GMT

ವಿಟ್ಲ: ಇಸ್ಲಾಮಿನ ಪಾರಂಪರಿಕ ತತ್ವ ಸಿದ್ಧಾಂತಗಳನ್ನು ಪ್ರತಿಪಾದಿಸುತ್ತಿರುವ ಉಲಮಾ ಸಂಘಟನೆ "ಸಮಸ್ತ"ಒಕ್ಕೂಟದ ಕಾರ್ಯ ಚಟುವಟಿಕೆಗಳು ದೇಶದಲ್ಲಿ ಶಾಂತಿ ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಧಾರ್ಮಿಕ ಗ್ರಂಥಗಳ ಬಾಹ್ಯಾರ್ಥವನ್ನು ಮಾತ್ರ ಕಲಿತು ಅದರ ತಿರುಳನ್ನು ಅರ್ಥ ಮಾಡಿ ಕೊಳ್ಳದ ಜನರಿಂದಾಗಿ ಧರ್ಮಕ್ಕೆ ಕೆಟ್ಟ ಹೆಸರು ಉಂಟಾಗುತ್ತಿದೆ. ಯುವ ಪೀಳಿಗೆ ಧರ್ಮವನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿದ ಉಲಮಾಗಳಿಂದ ದೂರ ಸರಿದು ರಾಜಕಿಯ ಸ್ವಾರ್ಥಿಗಳ ಹಿಂದೆ ಹೋದರೆ ಸಾಮಾಜಿಕ ವ್ಯವಸ್ಥೆ ಕಲುಷಿತ ಗೊಳ್ಳುವುದರಲ್ಲಿ ಸಂಶಯವಿಲ್ಲ ಎಂದು ಕೇರಳದ ಖ್ಯಾತ ವಾಗ್ಮಿ ಅಲವಿ ದಾರಿಮಿ ಕುಝಿಮಣ್ಣ ಹೇಳಿದ್ದಾರೆ.

ಅವರು ಜಿಲ್ಲಾ ದಾರಿಮೀಸ್ ವತಿಯಿಂದ ಇಲ್ಲಿಗೆ ಸಮೀಪದ ಕೆಲಿಂಜ ಮಸೀದಿ ವಠಾರದಲ್ಲಿ ಆಯೋಜಿಸಲಾಗಿದ್ದ ಶಂಸುಲ್ ಉಲಮಾ ಅನುಸ್ಮಣೆ ಹಾಗೂ ಅಧ್ಯಯನ ಶಿಬಿರದಲ್ಲಿ ಮುಖ್ಯ ಭಾಷಣಗಾರರಾಗಿ ಆಗಮಿಸಿ ಮಾತನಾಡಿದರು.

ಕೆ ಬಿ ಅಬ್ದುಲ್ ಖಾದರ್ ದಾರಿಮಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ದಾರಿಮಿ ಒಕ್ಕೂಟ ಅಧ್ಯಕ್ಷ ಎಸ್ ಬಿ ಮುಹಮ್ಮದ್ ದಾರಿಮಿ ಉದ್ಘಾಟಿಸಿದರು. ಸಮಸ್ತ ಮುಶಾವರ ಸದಸ್ಯರಾದ ಉಸ್ಮಾನುಲ್ ಪೈಝಿ ತೋಡಾರ್,ಬಂಬ್ರಾಣ ಉಸ್ತಾದ್ ಅನುಗ್ರಹ ಭಾಷಣ ಮಾಡಿದರು.ಸಂಪ್ಯ ಅಬ್ದುಲ್ ಹಮೀದ್ ದಾರಿಮಿ ದುಹಾಗೈದರು.

ಕೆಲಿಂಜ ಜುಮಾ ಮಸೀದಿ ಖತೀಬ್ ಅಬ್ಬಾಸ್ ದಾರಿಮಿ ಪ್ರಸ್ತಾವನೆಗೈದರು. ಸ್ವಾಗತ ಸಮಿತಿ ಚೇರ್ಮ್ಯಾನ್ ಹನೀಫ್ ದಾರಿಮಿ ಸುರಿಬೈಲು ದಿಕ್ಸೂಚಿ ಭಾಷಣ ಮಾಡಿದರು. ಕೆ ಆರ್ ಹುಸೈನ್ ದಾರಿಮಿ ರೆಂಜಲಾಡಿ,ಮೂಸಾ ದಾರಿಮಿ ಕಕ್ಕಿಂಜೆ ಮಾತನಾಡಿದರು. ಮಾಹಿನ್ ದಾರಿಮಿ ,ಬುರ್ಹಾನಿ ಉಸ್ತಾದ್ ಕಾಸರಗೋಡು ಮೌಲಿದ್ ಗೆ ನೇತೃತ್ವ ನೀಡಿದರು. ಕಲ್ಲಡ್ಕ ಮುದರ್ರಿಸ್ ಉಸ್ಮಾನ್ ದಾರಿಮಿ ಕಿರಾಹತ್ ಪಠಿಸಿದರು.

ಮುಹಮ್ಮದಲಿ ದಾರಿಮಿ ಕುಕ್ಕಾಜೆ ಸ್ವಾಗತಿಸಿದರು. ಅಬ್ದುಲ್ ಮಜೀದ್ ದಾರಿಮಿ ಕುಂಬ್ರ ಕಾರ್ಯಕ್ರಮ ನಿರ್ವಹಿಸಿದರು.

ಅಬ್ದುಲ್ ಕರೀಂ ದಾರಿಮಿ ಧನ್ಯವಾದ ಸಮರ್ಪಿಸಿದರು. ಇರ್ಷಾದ್ ಪೈಝಿ ಮುಖ್ವೆ,ಶರೀಪ್ ದಾರಿಮಿ ಪೊಮ್ಮಲೆ, ಅಝೀಝ್ ದಾರಿಮಿ ಕೊಡಾಜೆ, ಅಜ್ಜಕಟ್ಟೆ ದಾರಿಮಿ, ಜೋಕಟ್ಟೆ ಅಬ್ದುಲ್ ರಹಿಮಾನ್ ದಾರಿಮಿ ಉಸ್ತಾದ್, ಅಬೂಬಕ್ಕರ್ ಸಿದ್ದೀಖ್ ದಾರಿಮಿ ಕಡಬ, ಹಮೀದ್ ಫೈಝಿ ಆದೂರು ವಿಟ್ಲ ಮುದರ್ರಿಸ್ ದಾವೂದ್ ಹನೀಫಿ ಅಡೂರು, ಝುಬೈರ್ ದಾರಿಮಿ, ರಶೀದ್ ಹಾಜಿ ಪರ್ಲಡ್ಕ,ಹಕೀಂ ಪರ್ತಿಪಾಡಿ,ಇಸ್ಮಾಯಿಲ್ ಹಾಜಿ ಕೆಲಿಂಜ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದರು.

ಕಾರ್ಯಕ್ರಮದ ಮೊದಲು ಮಸೀದಿ ಅಧ್ಯಕ್ಷ ಅಬ್ದುಲ್ ಕರೀಂ ಕಂಪದ ಬೈಲ್ ದ್ವಜಾರೋಹಣ ಗೈದರು.

ಕೆ ಎಲ್ ಉಮರ್ ದಾರಿಮಿ, ಖಾಸಿಂ ದಾರಿಮಿ ನಂದಾವರ, ಅಬ್ದುಲ್ ಮಜೀದ್ ದಾರಿಮಿ ತೋಡಾರ್, ಶಂಸುದ್ದೀನ್ ದಾರಿಮಿ ಗಾಳಿಮುಖ, ಉಮರ್ ದಾರಿಮಿ ಸಾಲ್ಮರ,ಉಮರ್ ದಾರಿಮಿ ಪರ್ತಿಪ್ಪಾಡಿ,ನಸೀಹ್ ದಾರಿಮಿ ಮುದರ್ರಿಸ್ ಬೆಳ್ಳಾರೆ, ಅಬ್ದುಲ್ ಮಜೀದ್ ದಾರಿಮಿ ಬುಡೋಳಿ, ಯಹ್ಯಾ ದಾರಿಮಿ, ಇಬ್ರಾಹಿಂ ದಾರಿಮಿ ಕಡಬ, ಹನೀಫ್ ಫೈಝಿ ಸದರ್ ಕೆಲಿಂಜ, ಜಮಾಲ್ ಕೋಡಪದವು, ಬಶೀರ್ ಕೆಲಿಂಜ, ಶರೀಫ್ ಮೂಸಾ ಕುದ್ದುಪದವು, ಖಾದರ್ ಮಾಸ್ಟರ್ , ಅಬ್ದುರ್ರಝಾಕ್ ಕೆಲಿಂಜ, ಶೇಖ್ ಸುಬ್ಹಾನ್, ಮಾಮು ಕೆಲಿಂಜ, ಎಂ ಎಸ್ ಮುಹಮ್ಮದ್, ಉಸ್ಮಾನ್ ಹಾಜಿ ತಲಕ್ಕಿ, ಅಹ್ಮದ್ ಕುಂಞಿ ಕೆಲಿಂಜ, ಬಿ ಟಿ ಇಬ್ರಾಹಿಂ, ಪೊಡಿಯ ಮೊದಲಾದ ಅನೇಕ  ಗಣ್ಯರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News