ಗ್ರಾಮ ಪಂಚಾಯತ್ ಗ್ರಾಮದ ಹೃದಯಭಾಗ: ಯು.ಟಿ.ಖಾದರ್

Update: 2024-11-17 12:06 GMT

ಮುಡಿಪು: ಗ್ರಾಮ ಪಂಚಾಯತ್ ಗ್ರಾಮದ ಹೃದಯವಾಗಿದೆ. ಮುಡಿಪುವಿನ ಕೇಂದ್ರದಲ್ಲಿರುವ ಕುರ್ನಾಡು ಗ್ರಾಮ ಪಂಚಾಯತ್ ಹಳೇಕಚೇರಿಯ ಸ್ಥಳದಲ್ಲಿ ಎಲ್ಲಾ ಸೌಲಭ್ಯಗಳಿರುವ ನೂತನ ಗ್ರಾಮ ಪಂಚಾಯತಿ ಕಟ್ಟಡ ನಿರ್ಮಾಣ ಆಗಬೇಕೆಂಬುದು ಗ್ರಾಮಸ್ಥರ ಬಹುದಿನಗಳ ಕನಸಾಗಿತ್ತು. ಇದೀಗ ಎಲ್ಲರ ಸಹಕಾರದೊಂದಿಗೆ ನೂತನ‌ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದ್ದು ಆದಷ್ಟು ಶೀಘ್ರದಲ್ಲಿ ಕಟ್ಟಡ ನಿರ್ಮಾಣಗೊಂಡು ಗ್ರಾಮಸ್ಥರ ಉಪಯೋಗಕ್ಕೆ ಬರುವಂತಾಗಲಿ ಎಂದು ವಿಧಾನಸಭಾ ಅಧ್ಯಕ್ಷರಾದ ಯು.ಟಿ.ಖಾದರ್ ಅವರು ಹೇಳಿದರು.

ಅವರು ಶನಿವಾರದಂದು ಮುಡಿಪುವಿನಲ್ಲಿ ಕುರ್ನಾಡು ಗ್ರಾಮ ಪಂಚಾಯತ್ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ನಾವು ಶಾಶ್ವತವಲ್ಲ ಆದರೆ ನಾವು ಮಾಡುವ ಕೆಲಸ ಕಾರ್ಯಗಳು ಯಾವತ್ತಿಗೂ ಶಾಶ್ವತವಾಗಿರುತ್ತದೆ. ಉತ್ತಮ ಕೆಲಸಕ್ಕೆ ಎಲ್ಲರ ಸಹಕಾರ ಅಗತ್ಯ. ಕುರ್ನಾಡು ಗ್ರಾಮ ಪಂಚಾಯತಿ ಕಚೇರಿನ ಮುಡಿಪುವಿನ ಮುಕುಟವಾಗಿ ರೂಪುಗೊಳ್ಳಲಿ ಎಂದರು.

ಕುರ್ನಾಡು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ದೇವದಾಸ ಭಂಡಾರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕುರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲೋಲಾಕ್ಷಿ, ಮೂಡಾ ಅಧ್ಯಕ್ಷರಾದ ಸದಾಶಿವ ಉಳ್ಳಾಲ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಮತಾ ಗಟ್ಟಿ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಶಾಂತ್ ಕಾಜವ, ಕಣಂತೂರು ಕ್ಷೇತ್ರದ ಆಡಳಿತ ಮೊಕ್ತೇಸರರಾದ ಶ್ರೀ ದೇವಿ ಪ್ರಸಾದ್ ಪೊಯ್ಯತ್ತಾಯ, ಮುಖಂಡರಾದ ಚಂದ್ರಹಾಸ್ ಕರ್ಕೇರ, ಗಣೇಶ್ ನಾಯ್ಕ್, ಇಬ್ರಾಹಿಂ ನಡುಪದವು, ರಮೇಶ್ ಶೇಣವ ಮುಡಿಪು, ಅಬ್ದುಲ್ ಜಲೀಲ್ ಮೊಂಟುಗೋಳಿ, ನಾಸೀರ್ ನಡುಪದವು, ಅರುಣ್ ಡಿಸೋಜ , ಝುಬೈರ್ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಯು.ಟಿ.ಖಾದರ್ ಅವರನ್ನು ಪಂಚಾಯತಿ ವತಿಯಿಂದ ಗೌರವಿಸಲಾಯಿತು. ಪಂಚಾಯಿತಿ ಉಪಾಧ್ಯಕ್ಷರಾದ ಅಶ್ರಫ್ ಎಂ.ಕೆ.‌ಅವರು ಸ್ವಾಗತಿಸಿದರು. ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕೇಶವ ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News