ಮಾಂಡ್ ಸೊಭಾಣ್ : ಧಿಗೊ ಅಭಿಯಾನಕ್ಕೆ ಚಾಲನೆ
ಮಂಗಳೂರು : ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ಸ್ಥಾಪನೆಯಾಗಿ 39ನೇ ವರ್ಷಾ ರಂಭ ಮತ್ತು ತಿಂಗಳ ವೇದಿಕೆ ಸರಣಿಗೆ ೨೩ ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ತನ್ನ ಕೊಂಕಣಿ ಕೆಲಸಗಳಿಗೆ ಜನರ ಸಹಕಾರ ಕೋರಿ ‘ಧಿಗೊ ಅಭಿಯಾನ್ ಎಂಬ ಧನ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ತಿಂಗಳ ವೇದಿಕೆ ಸರಣಿಯಲ್ಲಿ ೨೭೬ನೇ ಕಾರ್ಯಕ್ರಮವಾಗಿ ಕಲಾಕುಲ್ ತಂಡವು ‘ಆಯ್ರಿಕ್ ಸಯ್ರಿಕ್ ನಾಟಕ ಪ್ರಸ್ತುತ ಪಡಿಸಿತು. ಶಕ್ತಿನಗರದ ಕಲಾಂಗಣದಲ್ಲಿ ನಗರದ ಚಾರ್ಟರ್ಡ್ ಅಕೌಂಟೆಂಟ್ ಒಲ್ವಿನ್ ರೊಡ್ರಿಗಸ್ ಧಿಗೊ ಅಭಿಯಾನದ ಕರಪತ್ರ ಹಾಗೂ ಕೂಪನ್‌ಗಳನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭ ಸುಮೇಳ್ ತಂಡ ಹಾಡಿದ ಕ್ರಿಸ್ಮಸ್ ಕ್ಯಾರಲ್ಸ್ ಹಾಡುಗಳ ವೀಡಿಯೊ ಲೋಕಾರ್ಪಣೆಗೊಳಿಸಲಾಯಿತು. ಇದನ್ನು ವಿಕಾಸ್ ಲಸ್ರಾದೊ ನಿರ್ದೇಶಿಸಿದ್ದು, ಮಾಂಡ್ ಸೊಭಾಣ್ ಯೂಟ್ಯೂಬ್ ಚಾನೆಲಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.
ಪ್ರಸಾರ ಭಾರತಿಯ ನಿವೃತ್ತ ಎಡಿಜಿ ಸಾತುರ್ನಿನ್ ಮಥಾಯಸ್ ಗಂಟೆ ಬಾರಿಸಿ ನಾಟಕಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಮಾಂಡ್ ಸೊಭಾಣ್‌ನ ಪದಾಧಿಕಾರಿಗಳಾದ ಎರಿಕ್ ಒಝೇರಿಯೊ, ಕೇರನ್ ಮಾಡ್ತಾ, ಎಲ್ರೊನ್ ರೊಡ್ರಿಗಸ್, ಅಜಯ್ ಡಿಸೋಜ ಉಪಸ್ಥಿತರಿದ್ದರು.
ಅರುಣ್‌ರಾಜ್ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು. ದಿ. ಲ್ಯಾನ್ಸಿ ಪಿಂಟೊ ನಾಯಕ್ ಬರೆದು, ಮನೀಷ್ ಪಿಂಟೊ ಎನ್‌ಎಸ್‌ಡಿ ನಿರ್ದೇಶಿಸಿದ ‘ಆಯ್ರಿಕ್ ಸಯ್ರಿಕ್ (ಆಯ್ರಿನಳಿಗೆ ಮದುವೆ ಪ್ರಸ್ತಾಪ)ವನ್ನು ಕಲಾಕುಲ್ ವಿದ್ಯಾರ್ಥಿಗಳು ಅಭಿನಯಿಸಿದರು.