ಕೊಣಾಜೆ: ಭಾರೀ ಮಳೆಗೆ ಹಲವೆಡೆ ಹಾನಿ
ಕೊಣಾಜೆ: ಫೆಂಗಲ್ ಚಂಡಮಾರುತ ಪರಿಣಾಮದಿಂದ ಕರಾವಳಿಯ ಹಲವೆಡೆ ಗುಡುಗು ಸಹಿತ ಭಾರೀ ಮಳೆ ಸುರಿದಿದ್ದು ಕೊಣಾಜೆ, ಮುಡಿಪು, ನರಿಂಗಾನ ದೇರಳಕಟ್ಟೆ ಹರೇಕಳ, ಪಾವೂರು ಬಾಳೆಪುಣಿ ವ್ಯಾಪ್ತಿಯ ಹಲವೆಡೆ ಸೋಮವಾರ ಸಂಜೆ ದಿಢೀರ್ ಆಗಿ ಸುರಿದ ಭಾರೀ ಮಳೆಗೆ ಹಲವಡೆ ಹಾನಿ ಸಂಭವಿಸಿದೆ.
ಭಾರೀ ಮಳೆಯಿಂದ ನರಿಂಗಾನ ಗ್ರಾಮದ ದೀಪಾವತಿ ಎಂಬವರ ಮನೆಯ ಮೇಲ್ಛಾವಣಿ ಕುಸಿದು ಹಾನಿ ಸಂಭವಿಸಿದೆ.
ಬೋಳಿಯಾರು ಗ್ರಾಮದ ರಂತಡ್ಕ ಎಂಬಲ್ಲಿ ಜಮೀಲಾ ಎಂಬವರ ಮನೆಯ ಸಮೀಪದ ಗುಡ್ಡ ಕುಸಿದು ಅಪಾಯದ ಹಂತ ದಲ್ಲಿದ್ದು ಮನೆಯವರನ್ನು ಸಂಬಂಧಿಕರ ಮನೆಗೆ ಸ್ಥಳಾಂತರ ಗೊಳ್ಳುವಂತೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಭಾಗದಲ್ಲಿ ಸಂಜೆ ವಿದ್ಯಾರ್ಥಿಗಳಿಗೆ ಶಾಲೆ ಬಿಡುವು ವೇಳೆಯೇ ಮಳೆ ಸುರಿಯಲಾರಂಭಿಸಿದರಿಂದ ಹೆಚ್ಚಿನ ಎಲ್ಲಾ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು. ಕೆಲವು ಕಡೆ ವಿದ್ಯಾರ್ಥಿಗಳು ಒದ್ದೆಯಾಗಿಕೊಂಡೇ ಮನೆಗೆ ತೆರಳುತ್ತಿದ್ದ ದೃಶ್ಯ ಕಂಡು ಬಂದಿತು.
ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶದಲ್ಲಿ ನೀರು ತುಂಬಿದ್ದು ಜೊತೆಗೆ ಕೆಲವಡೆ ಚರಂಡಿಗಳು ಬ್ಲಾಕ್ ಆಗಿ ರಸ್ತೆಯಲ್ಲೇ ನೀರು ಹರಿಯುತ್ತಿದ್ದ ದೃಶ್ಯ ಕಂಡು ಬಂದಿತು.