ಹಾಜಿ ಕೆ.ಎಸ್.ಮೊಹಮ್ಮದ್ ಮಸೂದ್‌ರನ್ನು ಭೇಟಿಯಾದ ಬ್ಯಾರಿ ಮಹಾಸಭಾ ನಿಯೋಗ
Update: 2024-12-17 14:36 GMT
ಮಂಗಳೂರು: ಅಖಿಲ ಭಾರತ ಬ್ಯಾರಿ ಮಹಾ ಸಭಾ ವತಿಯಿದ ಜ.8ರಂದು ಮಂಗಳೂರು ಪುರಭವನದಲ್ಲಿ ಆಯೋಜಿಸಲಿ ರುವ ದ.ಕ.ಜಿಲ್ಲಾ ಜಮಾಅತ್ ಪ್ರತಿನಿಧಿ ಸಮಾವೇಶಕ್ಕೆ ದ.ಕ ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ ಹಾಜ್ ಕೆ.ಎಸ್.ಮೊಹಮ್ಮದ್ ಮಸೂದ್ ಅವರನ್ನು ಅಖಿಲ ಭಾರತ ಬ್ಯಾರಿ ಮಹಾ ಸಭಾದ ನಿಯೋಗ ಮಂಗಳವಾರ ಭೇಟಿಯಾಗಿ ಸಮಾವೇಶಕ್ಕೆ ಆಹ್ವಾನ ನೀಡಿದರು.
ಸಮಾವೇಶದ ರೂಪು ರೇಷೆ, ಇತ್ಯಾದಿ ವಿಷಯಗಳ ಬಗ್ಗೆ ಅಬ್ದುಲ್ ಅಝೀಝ್ ಬೈಕಂಪಾಡಿ ನೇತೃತ್ವದ ನಿಯೋಗವು ಅಲ್ ಹಾಜ್ ಕೆ.ಎಸ್.ಮೊಹಮ್ಮದ್ ಮಸೂದ್ ರನ್ನು ಭೇಟಿಯಾಗಿ ಸಮಾವೇಶದ ರೂಪು ರೇಷೆಗಳ ಬಗ್ಗೆ ಚರ್ಚೆ ನಡೆಸಿದರು. ಕಾರ್ಯಕ್ರಮಕ್ಕೆ ಮಸೂದ್ ರನ್ನು ಅಹ್ವಾನಿಸಿ, ನಿಯೋಗವು ಅವರನ್ನು ಸನ್ಮಾನಿಸಿತು.
ಈ ಸಂದರ್ಭದಲ್ಲಿ ಡಾ. ಮೊಹಮ್ಮದ್ ಆರಿಫ್ ಮಸೂದ್, ಅಬ್ದುಲ್ ಜಲೀಲ್ ಕೃಷ್ಣಾಪುರ, ಅಶ್ರಫ್ ಬದ್ರಿಯಾ, ಮೊಹಮ್ಮದ್ ಹನೀಫ್ ಹಾಜಿ, ಅಬ್ದುಲ್ ಖಾದರ್ ಇಡ್ಮಾ, ಅಬ್ದುಲ್ ರಹ್ಮಾನ್ ಕೋಡಿಜಾಲ್ ಉಪಸ್ಥಿತರಿದ್ದರು.