ಅಂದರ್ ಬಾಹರ್: ಐವರ ಬಂಧನ
Update: 2024-12-17 15:40 GMT
ಕುಂದಾಪುರ, ಡಿ.17: ಕಾಳಾವರ ಗ್ರಾಮದ ಏಸ್‌ಬಾಂಡ್ ಫ್ಯಾಕ್ಟರಿಯ ಹಿಂಬದಿಯ ಸರಕಾರಿ ಹಾಡಿಯಲ್ಲಿ ಡಿ.17ರಂದು ಅಂದರ್-ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಐವರನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಅಸೋಡು ಗ್ರಾಮದ ಚಂದ್ರ(49), ಕಾಳಾವರ ಗ್ರಾಮದ ದಿನೇಶ್(35), ಗೋಪಾಲ(45), ವಕ್ವಾಡಿ ಗ್ರಾಮದ ಸುಧಾಕರ (37), ಕೋಣಿ ಗ್ರಾಮದ ಕೇಶವ(35) ಬಂಧಿತ ಆರೋಪಿಗಳು. ಇವರಿಂದ 12,270ರೂ. ನಗದು ಹಣವನ್ನು ವಶಪಡಿಸಿಕೊ ಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.