ಉಳ್ಳಾಲ ಮದನಿ ವಿದ್ಯಾಸಂಸ್ಥೆಯ ಸುವರ್ಣ ಮಹೋತ್ಸವಕ್ಕೆ ಚಾಲನೆ
ಉಳ್ಳಾಲ,ಡಿ.29:ಅಳೇಕಲದ ಮದನಿ ವಿದ್ಯಾಸಂಸ್ಥೆಯ ಸುವರ್ಣ ಮಹೋತ್ಸವದ ಉದ್ಘಾಟನೆ, ಪ್ರತಿಭೋತ್ಸವ ಹಾಗೂ ನೂತನ ಮಹಡಿಯ ಶಂಕುಸ್ಥಾಪನಾ ಕಾರ್ಯಕ್ರಮವು ಸಂಸ್ಥೆಯ ಅಧ್ಯಕ್ಷ ಬಿ.ಜಿ ಹನೀಫ್ ಹಾಜಿಯ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ಉಳ್ಳಾಲ ಸೆಯ್ಯದ್ ಮದನಿ ಅರೆಬಿಕ್ ಕಾಲೇಜಿನ ಪ್ರಾಂಶುಪಾಲ ಅಹ್ಮದ್ ಕುಟ್ಟಿ ಸಖಾಫಿ ನೆಲ್ಲಿಕುತ್ತು ದುಆಗೈದರು. ಸ್ಪೀಕರ್ ಯು.ಟಿ. ಖಾದರ್ ಉದ್ದೇಶಿತ ನೂತನ ಮಹಡಿಯ ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿದರು. ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಸುವರ್ಣ ಮಹೋತ್ಸವದ ಲಾಂಛನವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಉಳ್ಳಾಲ ನಗರ ಸಭೆಯ ಅಧ್ಯಕ್ಷೆ ಶಶಿಕಲಾ ಕೆ., ಕೌನ್ಸಿಲರ್ ಆಸ್ಕರಲಿ, ಕೇಂದ್ರ ಜುಮಾ ಮಸೀದಿ ಮಾಜಿ ಅಧ್ಯಕ್ಷರಾದ ಹಾಜಿ ಅಬ್ದುಲ್ ರಶೀದ್, ಯು.ಎಸ್ ಹಂಝ, ಆಡಳಿತ ಮಂಡಳಿ ಉಪಾಧ್ಯಕ್ಷರಾದ ಹಾಜಿ ಮುಹಮ್ಮದ್ ತ್ವಾಹ, ಕೋಶಾಧಿಕಾರಿ ಹಾಜಿ ಯು.ಪಿ ಅರಬಿ, ಜೊತೆ ಕಾರ್ಯದರ್ಶಿ ಯು.ಎನ್. ಇಕ್ಬಾಲ್, ಮದನಿ ವಿದ್ಯಾಸಂಸ್ಥೆಯ ಸಂಚಾಲಕ ಕೆ.ಎನ್. ಮುಹಮ್ಮದ್, ಬ್ರೈಟ್ ಮದನಿ ಆಂಗ್ಲ ಮಾಧ್ಯಮದ ಸಂಚಾಲಕ ತ್ವಾಹಿರ್ ತಂಳ್, ಅಕಾಡಮಿಕ್ ಅಡ್ವೈಸರ್ ಹಾಜಿ ಯು.ಟಿ. ಇಕ್ಬಾಲ್, ಲೆಕ್ಕ ಪರಿಶೋಧಕ ಯು.ಎ. ಇಬ್ರಾಹಿಂ ಆಲಿಯಬ್ಬ, ಸದಸ್ಯರಾದ ಯು.ಎ ಇಸ್ಮಾಯಿಲ್, ಯು.ಎ ಬಾವ, ಯು.ಪಿ ಅಬ್ಬಾಸ್, ಯು.ಎಸ್ ಫಾರೂಕ್, ಮದನಿ ಅಲುಮ್ನಿ ಅಧ್ಯಕ್ಷ ಕೆ.ಎ. ಮುನೀರ್ ಬಾವ, ಉದ್ಯಮಿ ಸೂಫಿಖಾನ್, ಪಂಡಿತ್ ಮುಹಮ್ಮದ್, ಆರ್.ಕೆ. ಯಾಕುಬ್ ಹಾಜರಿದ್ದರು.
ಪ್ರತಿಭೋತ್ಷವ ಪ್ರಯುಕ್ತ ಸಂಸ್ಥೆಯ ವಿದ್ಯಾರ್ಥಿಗಳಿಂದ ಹಾಗೂ ಪೂರ್ವ ವಿದ್ಯಾರ್ಥಿ ಸಂಘಟನೆಯಾದ ಮದನಿ ಅಲುಮ್ನಿ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದುವು.
ಸಂಸ್ಥೆಯ ಪದವಿ ಪೂರ್ವ ವಿಭಾಗದ ಪ್ರಾಂಶುಪಾಲ ಅಬ್ದುಲ್ ಅಝೀಝ್ ಸ್ವಾಗತಿಸಿದರು. ನಿವೃತ್ತ ಪ್ರಾಂಶುಪಾಲ ಇಸ್ಮಾಯಿಲ್ ಟಿ. ವರದಿ ವಾಚಿಸಿದರು. ಉಪನ್ಯಾಸಕ ಹಬೀಬ್ ರಹಿಮಾನ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಪತಾಕ್ ವಂದಿಸಿದರು.