ಮುಸ್ಲಿಂ ಲೀಗ್‌ ಮುಖಂಡ ಎ.ಎಸ್.ಇ ಕರೀಮ್ ಕಡಬ ಅನುಸ್ಮರಣಾ ಸಂಗಮ

Update: 2025-01-01 02:30 GMT

ಮಂಗಳೂರು: ಇತ್ತೀಚೆಗೆ ಅಗಲಿದ ಮುಸ್ಲಿಂ ಲೀಗ್ ಹಿರಿಯ ಮುಖಂಡರಾದ ಎ.ಎಸ್.ಇ ಕರೀಮ್ ಕಡಬ ಅವರ ಅನುಸ್ಮರಣಾ ಸಂಗಮವು ಮುಸ್ಲಿಂ ಲೀಗ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ  ಮಂಗಳೂರಿನ ಕಂಕನಾಡಿಯಲ್ಲಿರುವ ಜಂ-ಇಯ್ಯತ್ತುಲ್ ಫಲಾಹ್ ನಲ್ಲಿ ನಡೆಯಿತು.

ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷರಾದ ಸಿ.ಅಬ್ದುರ್ರಹ್ಮಾನ್ ಮಂಗಳೂರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.‌ ಸಯ್ಯಿದ್ ಅಫ್ಹಾಂ ತಂಙಳ್ ಪ್ರಾರ್ಥನೆ ನೆರವೇರಿಸಿದರು.

ಸಯ್ಯಿದ್ ಶಾಹುಲ್ ಹಮೀದ್ ತಂಙಳ್, ಜಿಲ್ಲಾ ಮುಸ್ಲಿಂ ಲೀಗ್ ಕೋಶಾಧಿಕಾರಿ ರಿಯಾಝ್ ಹರೇಕಳ, ಎ.ಎಸ್.ಇ ಕರೀಮ್ ಕಡಬ ಅವರ ಪುತ್ರ  ಸಲಾಹುದ್ಧೀನ್ ಅಯ್ಯೂಬಿ, ಮುಸ್ಲಿಂ ಲೀಗ್ ಜಿಲ್ಲಾ ಉಪಾಧ್ಯಕ್ಷ ಇಸ್ಮಾಯಿಲ್, ಹಾಜಿ ಹಮೀದ್ ಕುಂಡಾಲ, ಹಿರಿಯ ಸದಸ್ಯರಾದ ಕರಾಮತ್ ಕುಡುಪಾಡಿ {ಕೆಸಿ} ಅಬ್ದುಲ್ ಖಾದರ್ ಕಾವೂರ್, ಮಾಜಿ ಕಾರ್ಯದರ್ಶಿ ವಿ. ಅಬ್ದುಲ್ ಖಾದರ್ ಕಂಕನಾಡಿ, ಮುಸ್ಲಿಂ ಯೂತ್ ಲೀಗ್ ರಾಜ್ಯ ನಾಯಕ ಶಬೀರ್ ಅಬ್ಬಾಸ್ ತಲಪಾಡಿ, msf ಜಿಲ್ಲಾಧ್ಯಕ್ಷ ಝುಲ್ಛಿಕರ್ ಅಲಿ ಎಚ್.ಕಲ್ಲು ಹಾಗೂ ಕರೀಮ್ ಕಡಬ ಅವರ ಕುಟುಂಬಸ್ಥರು ಮತ್ತು ಜಿಲ್ಲಾ ಮುಸ್ಲಿಂ ಲೀಗ್ ನಾಯಕರು ಉಪಸ್ಥಿತರಿದ್ದರು.

 ಮುಸ್ಲಿಂ ಲೀಗ್ ಜಿಲ್ಲಾ ಕಾರ್ಯದರ್ಶಿ ನೌಶಾದ್ ಮಲಾರ್ ಕಾರ್ಯಕ್ರಮ ನಿರೂಪಿಸಿದರು. 


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News