ಕರ್ನಾಟಕ ಹಜ್ ಸಮಿತಿ ಸದಸ್ಯ ಆದೂರು ತಂಙಳ್‌ಗೆ ರಿಯಾದ್‌ನಲ್ಲಿ ಸ್ವಾಗತ
ರಿಯಾದ್, ಡಿ.31: ಕರ್ನಾಟಕ ಹಜ್ ಸಮಿತಿಯ ಸದಸ್ಯರಾಗಿ ಆಯ್ಕೆಯಾದ ಬಳಿಕ ರಿಯಾದ್‌ಗೆ ಮೊದಲ ಬಾರಿ ಇತ್ತೀಚೆಗೆ ಭೇಟಿ ನೀಡಿದ ಶರಫುಸ್ಸಾದಾತ್ ಸಯ್ಯಿದ್ ಅಶ್ರಫ್ ಅಸ್ಸಖಾಫ್ ತಂಙಳ್ ಆದೂರು ಅವರಿಗೆ ಮಜ್ಲಿಸ್ ರಿಯಾದ್ ಸಮಿತಿಯ ವತಿಯಿಂದ ಸ್ವಾಗತಿಸಲಾಯಿತು.
ಲುಹಾ ಆಡಿಟೋರಿಯಂನಲ್ಲಿ ನಡೆದ ಸಮಾರಂಭವನ್ನು ಐಸಿಎಫ್ ಈಸ್ಟರ್ನ್ ದಅವಾ ಕಾರ್ಯದರ್ಶಿ ಹಾರಿಸ್ ಝೊಹರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೆಸಿಎಫ್ ರಿಯಾದ್ ಅಧ್ಯಕ್ಷ ಹಂಝ ಉಸ್ತಾದ್ ಕೊಡಕ್ ಅಧ್ಯಕ್ಷತೆ ವಹಿಸಿದ್ದರು.
ಎಸ್‌ಎಸ್‌ಎಫ್ ಮಾಜಿ ರಾಜ್ಯ ಉಪಾಧ್ಯಕ್ಷ ಹಜ್ಬುಲ್ಲಾಹ್ ಖಾದಿರಿ ಮುಖ್ಯ ಭಾಷಣ ಮಾಡಿದರು.
ಅಶ್ರಫ್ ಹಾಜಿ ಚೆನ್ನೈ, ಲತೀಫ್ ಸಅದಿ ಉರುಮಿ, ಲತೀಫ್ ಯೂನಿವರ್ಸಲ್, ನಸೀರ್ ಮುದುಕುಟ್ಟ, ಅಸೀಸ್ ಬಜ್ಪ್ಟೆ, ದಾವೂದ್ ಸಅದಿ, ಮುಜೀಬ್ ಎರ್ನಾಕುಲು, ಸಿಪಿ ಉಸ್ತಾದ್, ಬಶೀರ್ ಲಾಯಿಲ್, ಶರೀಫ್ ಕಲಂಜಿಬೈಲ್, ಸಿದ್ದೀಕ್ ಉಪ್ಪಳ ಅವರು ಈ ಸಂದರ್ಭದಲ್ಲಿ ಶುಭ ಹಾರೈಸಿದರು. ಸಯ್ಯದ್ ಮುಸ್ತಫಾ ಅವರು ಪ್ರಾರ್ಥಿಸಿದರು.
ಶರಫುಸ್ಸಾದಾತ್ ಸಯ್ಯಿದ್ ಅಶ್ರಫ್ ತಂಙಳ್ ಆದೂರು ಆಧ್ಯಾತ್ಮ ಮಜ್ಲಿಸ್‌ಗೆ ನೇತೃತ್ವ ನೀಡಿದರು. ಶರೀಫ್ ಅಮಾನಿ ಸ್ವಾಗತಿಸಿದರು , ನಿಸಾಮುದ್ದೀನ್ ಸಾಗರ್ ಧನ್ಯವಾದ ಸಲ್ಲಿಸಿದರು.