ಮಂಗಳೂರು: ಧರಾಶಾಹಿಯಾದ ಬೃಹತ್ ಗಾತ್ರದ ಮರ; ಅಪಾರ ಹಾನಿ
Update: 2025-01-01 07:34 GMT
ಮಂಗಳೂರು: ಬೃಹತ್ ಗಾತ್ರದ ಮರವೊಂದು ನೆಲಕ್ಕುರುಳಿದ ಘಟನೆ ಬಲ್ಮಠ ಸಹೋದಯ ಸಭಾಂಗಣದ ಮುಂಭಾಗದ ಕ್ರೀಡಾಂಗಣದ ಬಳಿ ನಡೆದಿದೆ.
ಮರವು ವಿದ್ಯುತ್ ತಂತಿ, ಕಂಬಗಳ ಮೇಲೆಯೇ ಉರುಳಿ ಬಿದ್ದ ಪರಿಣಾಮ ಅಪಾರ ಹಾನಿಗಳಾಗಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಹಾಗೂ ನೀರಿನ ಸರಬರಾಜಿನಲ್ಲಿ ಸಮಸ್ಯೆ ಉಂಟಾಗಿದೆ ಎನ್ನಲಾಗುತ್ತಿದೆ.
ವಾಹನಗಳು ಜಖಂ ಆಗಿದ್ದು, ಒಂದು ಕುಟುಂಬ ಅಪಾಯದಿಂದ ಪಾರಾಗಿದೆ ಎಂದು ತಿಳಿದು ಬಂದಿದೆ.