'ಸೈಬರ್ ಸುರಕ್ಷತೆ: ಸವಾಲುಗಳು' ಉಪನ್ಯಾಸ ಕಾರ್ಯಕ್ರಮ
ಕೊಣಾಜೆ: ಪಿ.ಎ. ಕಾಲೇಜು ಆಫ್ ಎಂಜಿನಿಯರಿಂಗ್, ಮಂಗಳೂರು ವಿಶ್ವವಿದ್ಯಾನಿಲಯದ ಮತ್ತು ಕಾರ್ಡಿಫ್ ಮೆಟ್ರೋ ಪೋಲಿಟನ್ ಯೂನಿವರ್ಸಿಟಿ ಯು.ಕೆ. ಇವುಗಳ ಸಹಯೋಗದಲ್ಲಿ “ಸೈಬರ್‌ಸುರಕ್ಷತೆ: ತತ್ವಗಳು ಮತ್ತು ಸವಾಲುಗಳು” ಎಂಬ ವಿಷಯದಲ್ಲಿ ಉಪನ್ಯಾಸ ಕಾರ್ಯಕ್ರಮವು ಪಿ.ಎ.ಕಾಲೇಜು ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಡಿಫ್ ಮೆಟ್ರೋಪೋಲಿಟನ್ ಯೂನಿವರ್ಸಿಟಿ, ಯು.ಕೆ. ಇದರ ಪ್ರಗತಿಶೀಲ ಕಂಪ್ಯೂಟರ್ ಸುರಕ್ಷತೆ ವಿಭಾಗದ ಸಿಬ್ಬಂದಿ ಮತ್ತು ಪ್ರೊಗ್ರಾಮ್ ನಿರ್ದೇಶಕಿ ಡಾ. ವಿಭೂಷಿಣಿ ಬೆಂಟೋಟಹೇವಾ ಅವರು ಡಿಜಿಟಲ್ ಆಸ್ತಿ ರಕ್ಷಿಸುವಲ್ಲಿ ಮಾಹಿತಿಯ ಸುರಕ್ಷತೆಯ ಕುರಿತು ಹಾಗೂ ಬಲವಾದ ಸೈಬರ್ ಸುರಕ್ಷತೆ ಕ್ರಮಗಳ ಮಹತ್ವವನ್ನು ವಿವರಿಸಿದರು.
ಕಾರ್ಡಿಫ್ ಮೆಟ್ರೋಪೋಲಿಟನ್ ಯೂನಿವರ್ಸಿಟಿ, ಯು.ಕೆ. ನ ಕಂಪ್ಯೂಟರ್ ಸುರಕ್ಷತೆ ವಿಭಾಗದ ಸಿಬ್ಬಂದಿ ಮತ್ತು ಪ್ರೊಗ್ರಾಮ್ ನಿರ್ದೇಶಕಿ ಡಾ. ಲಿಕಾ ನವಾಫ್ ಸೈಬರ್ ಸುರಕ್ಷತೆ ಆರ್ಕಿಟೆಕ್ಚರ್‌ಗಳ ಬಗ್ಗೆ ಪ್ರಮುಖ ವಿಷಯಗಳನ್ನು ಹಂಚಿಕೊಂಡರು.
ಮಂಗಳೂರು ವಿಶ್ವವಿದ್ಯಾಲಯದ ಇಲೆಕ್ಟ್ರಾನಿಕ್ಸ್ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಎ. ಎಂ. ಖಾನ್ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮಂಗಳೂರು ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಶೇಖರ್, ವಿಭಾಗದ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಉಪಸ್ಥಿತರಿದ್ದರು ಮತ್ತು ಪಿ.ಎ. ಕಾಲೇಜು ಆಫ್ ಎಂಜಿನಿಯರಿಂಗ್ ನ ಸಿಎಸ್ಇ ವಿಭಾಗದ ಮುಖ್ಯಸ್ಥರು ಹಾಗೂ ಉಪಪ್ರಾಂಶುಪಾಲರಾದ ಪ್ರೊ. ಶರ್ಮಿಳಾ ಕುಮಾರಿ ಎಂ. ಕಾರ್ಯಕ್ರಮ ಸಂಯೋಜಿಸಿದರು. ಪ್ರೊ. ಫಾತಿಮತ್ ರೈಹಾನ್ ಕಾರ್ಯಕ್ರಮವನ್ನು ನಿರೂಪಿಸಿದರು.