ಅಡ್ಡೂರು ಸಹರಾ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ

Update: 2025-01-02 12:41 GMT

ಮಂಗಳೂರು, ಜ.2: ಗುರುಪುರ ಗ್ರಾಪಂ ವ್ಯಾಪ್ತಿಯ ಅಡ್ಡೂರಿನ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್‌ನ ಸಹರಾ ಸಮೂಹ ಶಿಕ್ಷಣ ಸಂಸ್ಥೆಯ 2024ರ ಸಾಲಿನ ವಾರ್ಷಿಕೋತ್ಸವವು ಅಸೋಸಿಯೇಶನ್‌ನ ಅಧ್ಯಕ್ಷ ಯು. ಪಿ.ಇಬ್ರಾಹಿಮ್‌ರ ಅಧ್ಯಕ್ಷತೆ ಯಲ್ಲಿ ಗುರುವಾರ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿ ಉಪನ್ಯಾಸಕ, ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಮಾತನಾಡಿ, ಪ್ರತಿಯೊಂದು ಮಗುವಿನಲ್ಲಿ ಅದ್ಭುತ ಪ್ರತಿಭೆ ಸುಪ್ತವಾಗಿದ್ದು, ಸೂಕ್ತ ಶಿಕ್ಷಣದಿಂದ ಪ್ರತಿಭೆಯ ಅನಾವರಣ ಗೊಳ್ಳುತ್ತದೆ. ನಮ್ಮನ್ನು ನಾವು ತಿದ್ದಿಕೊಂಡಾಗ ನಮಗೆ ಮತ್ತು ಸಮಾಜಕ್ಕೆ ಒಳ್ಳೆಯದಾಗುತ್ತದೆ. ಎಲ್ಲರೂ ಈ ರೀತಿ ಚಿಂತಿಸಿದಾಗ ಕೆಡುಕೆಂಬುದು ಇರುವುದಿಲ್ಲ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮಾತನಾಡಿ, ದಿವಂಗತ ಬಿ.ಎ.ಮೊದಿನ್ ಅವರ ದೂರದೃಷ್ಟಿಯಿಂದ ನಮ್ಮ ಸಮಾಜ ಶಿಕ್ಷಣ ಪಡೆಯುವಂತಾಯಿತು. ಸಹರಾ ಶಿಕ್ಷಣ ಸಂಸ್ಥೆಯಲ್ಲಿ ಮೌಲ್ಯಾಧರಿತ ಶಿಕ್ಷಣ ಸಿಗುತ್ತಿದೆ. ಶಾಲೆಗಿರುವ ಮೈದಾನದ ಕೊರತೆ ನೀಗಿಸುವಲ್ಲಿ ಸರಕಾರಿ ಮಟ್ಟದ ಮಾತುಕತೆ ಪೂರಕ ವ್ಯವಸ್ಥೆ ಮಾಡುವೆ ಎಂದರು.

ಉದ್ಯಮಿ ಪಿ. ಜಯರಾಮ ಕೃಷ್ಣ, ಬಜ್ಪೆಠಾಣೆಯ ಎಸ್ಸೈ ರೇವಣ್ಣ ಸಿದ್ದಪ್ಪಮಾತನಾಡಿದರು. ಜಿಲ್ಲಾ ಪ್ರಶಸ್ತಿ ಪುರಸ್ಕೃತ ಅಡ್ಡೂರಿನ ಫೈವ್ ಸ್ಟಾರ್ ಕ್ಲಬ್ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಶಿಕ್ಷಕಿ ದೀಪ್ತಿ ಸ್ವಾಗತಿಸಿದರು. ಸಹರಾ ಆಂಗ್ಲ ಮಾಧ್ಯಮ ಪಿಯು ಕಾಲೇಜಿನ ಪ್ರಾಂಶುಪಾಲ ಕೇಶವ ಎಚ್. ಪ್ರಾಸ್ತಾವಿಕ ಮಾತನ್ನಾಡಿದರು. ಕಾರ್ಯಕ್ರಮದಲ್ಲಿ ಗುರುಪುರ ಗ್ರಾಪಂ ಉಪಾಧ್ಯಕ್ಷ ದಾವೂದ್ ಬಂಗ್ಲೆಗುಡ್ಡೆ, ಫೈವ್ ಸ್ಟಾರ್ ಕ್ಲಬ್‌ನ ಅಧ್ಯಕ್ಷ ಹಬೀಬ್, ಸಂಚಾಲಕ ಎ.ಕೆ. ಇಸ್ಮಾಯಿಲ್, ಎಂಡಬ್ಲ್ಯೂಎ ಉಪಾಧ್ಯಕ್ಷ ಅಹ್ಮದ್ ಬಾವಾ ಅಂಗಡಿಮನೆ ಮತ್ತು ಎನ್.ಇ.ಮುಹಮ್ಮದ್, ಕಾರ್ಯದರ್ಶಿ ಎನ್. ಇಸ್ಮಾಯಿಲ್, ಖಜಾಂಚಿ ಎ.ಕೆ.ಅಶ್ರಫ್, ಜೊತೆ ಕಾರ್ಯದರ್ಶಿ ನೂರೂಲ್ ಅಮಿನ್, ಪಿಟಿಎ ಅಧ್ಯಕ್ಷ ವಿಶ್ವಾಂಭರ, ಉಪಾಧ್ಯಕ್ಷೆ ಪ್ರಮೀಳಾ ಡಿ.ಮಾರ್ಲ ಉಪಸ್ಥಿತರಿದ್ದರು.

ಶಿಕ್ಷಕಿಯರಾದ ಸ್ವಾತಿ, ಪ್ರಮೋದಾ, ಹರ್ಷಿತಾ ಮತ್ತು ಅಶ್ರಫುನ್ನಿಸಾ ಕಾರ್ಯಕ್ರಮ ನಿರೂಪಿಸಿದರು. ವಂದನಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News