ಮಲ್ಲೂರು: ಜ.9ರಿಂದ 12ರ ವರೆಗೆ ಸ್ವಲಾತ್ ವಾರ್ಷಿಕ, ಮಜ್ಲಿಸುನ್ನೂರ್ ಕಾರ್ಯಕ್ರಮ
ಮಂಗಳೂರು, ಜ.2: ಮಲ್ಲೂರು ಬದ್ರಿಯಾ ನಗರದ ಅಲ್ ಮಸ್ಜಿದುಲ್ ಬದ್ರಿಯಾ ಜುಮಾ ಮಸೀದಿಯ 38ನೇ ಸ್ವಲಾತ್ ವಾರ್ಷಿಕ ಹಾಗೂ 8ನೇ ವರ್ಷದ ಮಜ್ಲಿಸುನ್ನೂರ್ ಕಾರ್ಯಕ್ರಮ ಜನವರಿ 9ರಿಂದ 12ರವರೆಗೆ ನಡೆಯಲಿದೆ ಎಂದು ಮಸೀದಿಯ ಆಡಳಿತ ಸಮಿತಿಯ ಅಧ್ಯಕ್ಷ ಮುಹಮ್ಮದ್ ಅಶ್ರಫ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಜ.9ರಂದು ಬೆಳಗ್ಗೆ 9ಕ್ಕೆ ಧ್ವಜಾರೋಹಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಆ ದಿನ ಮಗ್ರಿಬ್ ನಮಾಝ್ ಬಳಿಕ ಮದ್ರಸದ ಹಳೆ ವಿದ್ಯಾರ್ಥಿಗಳಿಂದ ಕಲಾ ಸಾಹಿತ್ಯ ಸ್ಪರ್ಧೆ ನಡೆಯಲಿದ್ದು, ಇಶಾ ನಮಾಝ್ ಬಳಿಕ ಇರ್ಶಾದ್ ದಾರಿಮಿ ಮಿತ್ತಬೈಲ್ ಕಾರ್ಯಕ್ರಮ ಉದ್ಘಾಟಿಸುವರು. ಯು.ಕೆ. ಮುಹಮ್ಮದ್ ಹನೀಫ್ ನಿಝಾಮಿ ಅಲ್ ಮುರ್ಷಿದಿ ಮೊಗ್ರಾಲ್ ಮತ ಪ್ರವಚನ ನೀಡಲಿದ್ದಾರೆ. ಎ.10ರಂದು ಅಸರ್ ನಮಾಜ್ ಬಳಿಕ ನೂರುಲ್ ಹುದಾ ಮದ್ರಸದದ ವಿದ್ಯಾರ್ಥಿಗಳಿಂದ ಅಲ್ ನಜಾಹ್ ಆರ್ಟ್ ಫೆಸ್ಟ್ ನಡೆಯಲಿದೆ. ಮುಹಮ್ಮದ್ ಅಝ್ಹರ್ ಫೈಝಿ ಉದ್ಘಾಟನೆ ನೆವೇರಿಸಲಿದ್ದಾರೆ.
ಜ.11ರಂದು ಅಸರ್ ನಮಾಝ್ ಬಳಿಕ ಕೇರಳ ಜಂ ಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯದುಲ್ ಉಲಮಾ ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ನೂತನ ಕಟ್ಟಡ ಉದ್ಘಾಟಿಸಲಿದ್ದಾರೆ. ಮಗ್ರಿಬ್ ನಮಾಝ್ ನಂತರ ಇಶ್ಕ್ ಮಜ್ಲಿಸ್ ನಡೆಯಲಿದ್ದು, ಅನ್ವರ್ ಅಲಿ ಹುದವಿ ಕೇರಳ ನೇತೃತ್ವ ವಹಿಸಲಿದ್ದಾರೆ. ರಾತ್ರಿ 9:30ಕ್ಕೆ ನಅತೇ ಶರೀಫ್ ಕಾರ್ಯಕ್ರಮದಲ್ಲಿ ನೂರಿ ಮಿಯಾನ್ ಅಹ್ಮದ್ ರಾಝ್ ಭಾಗವಹಿಸಲಿದ್ದಾರೆ.
ಜ.12ರಂದು ಮಗ್ರಿಬ್ ನಮಾಝ್ ಬಳಿಕ 38ನಢ ಸ್ವಲಾತ್ ವಾರ್ಷಿಕ ಹಾಗೂ 8ನೇ ಮಜ್ಲಿಸುನ್ನೂರ್ ನಡೆಯಲಿದೆ. ರಾಜ್ಯ ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಬಿ.ಝೆಡ್. ಝಮೀರ್ ಅಹ್ಮದ್ ಖಾನ್ ಭಾಗವಹಿಸಲಿದ್ದಾರೆ. ಉಳಿದಂತೆ ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ರಾಜಕೀಯ ಮುಖಂಡರು, ಧಾರ್ಮಿಕ ಪಂಡಿತರು ಹಾಗೂ ಜಮಾಅತ್ ನ ಮುತವಲ್ಲಿಗಳು ಭಾಗವಹಿಸಲಿದ್ದಾರೆ ಎಂದು ಸ್ಥಳೀಯ ಖತೀಬ್ ಶಮೀರ್ ದಾರಿಮಿ ಮಾಡಾವು ವಿವರ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಲ್ಲೂರು ಗ್ರಾಪಂ ಮಾಜಿ ಅಧ್ಯಕ್ಷ ಎಂ.ಕೆ. ಯೂಸುಫ್, ಜಮಾಅತ್ ಮಾಜಿ ಅಧ್ಯಕ್ಷ ಎ.ಕೆ. ಉಸ್ಮಾನ್, ಮುಹಮ್ಮದ್ ಅಸ್ರಾರುದ್ದೀನ್, ಉಪಾಧ್ಯಕ್ಷ ಮುಸ್ತಫ ದೆಕ್ಕಳ, ಕೋಶಾಧಿಕಾರಿ ಇಬ್ರಾಹೀಂ ಬದ್ರಿಯಾ ನಗರ ಉಪಸ್ಥಿತರಿದ್ದರು.