ಚಲನಚಿತ್ರೋದ್ಯಮ ಕುಸಿಯುತ್ತಿರುವಾಗ ‘ಪಯಣ್’ ಶತದಿನಗಳ ಪ್ರದರ್ಶನ ಕಂಡಿರುವುದು ಆಶಾದಾಯಕ ಬೆಳವಣಿಗೆ: ಐವನ್ ಡಿಸೋಜ

Update: 2024-12-30 15:17 GMT

ಮಂಗಳೂರು: ಜಗತ್ತಿನಾದ್ಯಂತ ಚಲನ ಚಿತ್ರೋದ್ಯಮವು ಕುಸಿತ ಕಂಡಿರುವಾಗ ಕೊಂಕಣಿ ಭಾಷೆಯ ಪ್ರಾದೇಶಿಕ ಚಿತ್ರವೊಂದು ನೂರು ದಿನಗಳ ಪ್ರದರ್ಶನ ಕಂಡಿರುವುದು ನಿಜಕ್ಕೂ ಆಶಾದಾಯಕ ಬೆಳವಣಿಗೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಹೇಳಿದ್ದಾರೆ.

ಬಿಜೈನಲ್ಲಿರುವ ಭಾರತ್ ಸಿನೇಮಾದಲ್ಲಿ ‘ಪಯಣ್’ಕೊಂಕಣಿ ಚಲನಚಿತ್ರದ ಶತದಿನೋತ್ಸವ ಸಂಭ್ರಮಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಸೀಮಿತ ಮಾರುಕಟ್ಟೆ ಮತ್ತು ಸಂಪನ್ಮೂಲಗಳ ಕೊರತೆಯಿಂದಾಗಿ. ಕೊಂಕಣಿಯಲ್ಲಿ ಚಲನಚಿತ್ರಗಳನ್ನು ತಯಾರಿಸುವುದು ಯಾವುದೇ ಲಾಭದ ನಿರೀಕ್ಷೆಯಿಂದಲ್ಲ ಮಾತೃಭಾಷೆಯ ಮೇಲಿನ ಪ್ರೇಮದಿಂದ. ‘ಪಯಣ್’ ಕೊಂಕಣಿಯಲ್ಲಿ ಇದುವರೆಗೆ ಬಂದಂತಹ ಎಲ್ಲಾ ಚಿತ್ರಗಳಿಗಿಂತ ಭಿನ್ನವಾಗಿದ್ದು, ಧನಾತ್ಮಕ ಚಿಂತನೆಗಳನ್ನು ಪ್ರೇರೇಪಿಸುವ ಕಲಾತ್ಮಕ ಚಿತ್ರವಾಗಿ ಮೂಡಿ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಂತ ಅಲೋಶಿಯಸ್ ವಿದ್ಯಾ ಸಂಸ್ಥೆಗಳ ರೆಕ್ಟರ್ ವಂ. ಫಾ. ಮೆಲ್ವಿನ್ ಜೋಸೆಫ್ ಪಿಂಟೊ, ಅನಿವಾಸಿ ಉದ್ಯಮಿ ಜೇಮ್ಸ್ ಮೆಂಡೊನ್ಸಾ ಮತ್ತು ದಾಖಲೆ ನಿರ್ಮಿಸಿದ ‘ಅಸ್ಮಿತಾಯ್’ ಕೊಂಕಣಿ ಚಿತ್ರ ನಿರ್ಮಾಪಕ ಹಾಗೂ ಮಾಂಡ್ ಸೊಭಾಣ್ ಸಂಸ್ಥೆಯ ಅಧ್ಯಕ್ಷ ಲುವಿ ಪಿಂಟೊ ಅತಿಥಿಗಳಾಗಿ ಭಾಗವಹಿಸಿದ್ದರು.

ಪಯಣ್‌ಸಿನಿಮಾ ನಿರ್ದೇಶಕ ‘ ಜೊಯೆಲ್ ಪಿರೇರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಯಣ್ ಚಲನಚಿತ್ರದ ನಿರ್ಮಾಪಕ ಮೆಲ್ವಿನ್ ಪೆರಿಸ್ ಚಲನಚಿತ್ರದ ಯಶಸ್ಸಿಗೆ ಕಾರಣರಾದವರಿಗೆ ಕೃತಜ್ಞತೆ ಸಲ್ಲಿಸಿದರು. ಸಿನಿಮಾ ನಟ ಲೆಸ್ಲಿ ರೇಗೊ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News