ಎ ಇಲೆವೆನ್ ರಾಜ್ಯ ಮಟ್ಟದ ಪ್ರೋ ಕಬ್ಬಡಿ: ಆಳ್ವಾಸ್ ಚಾಂಪಿಯನ್‌

Update: 2024-12-31 16:45 GMT

ಮುಲ್ಕಿ: ಕ್ರೀಡಾ ಸಂಘಟನೆಯೊಂದಿಗೆ ಅಶಕ್ತರಿಗೆ ನೆರವಾಗುತ್ತಿರುವುದು ಶ್ಲಾಘನೀಯ, ಯುವ ಸಮುದಾಯವು ಕ್ರೀಡೆಯಿಂದ ಸಮಾಜ ಸೇವೆಯತ್ತ ಮುಂದುವರಿಯಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ. ರೈ ಹೇಳಿದರು.

ಅವರು ಸಸಿಹಿತ್ಲುವಿನ ಶ್ರೀ ಭಗವತೀ ದೇವಸ್ಥಾನದ ಬಳಿಯಲ್ಲಿ ಸಸಿಹಿತ್ಲು ಎ" ಇಲೆವೆನ್ ಸ್ಪೋರ್ಟ್ಸ್ ಕ್ಲಬ್‌ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾಜ್ಯ ಮಟ್ಟದ ಪ್ರೊ ಕಬಡ್ಡಿ-2024 ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಇದೇ ಸಂದರ್ಭ ಸಸಿಹಿತ್ಲು ಗ್ರಾಮದ ಅರ್ಹ ಅಶಕ್ತರಿಗೆ ಹಾಗೂ ಪ್ರತಿಭಾಂತರಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಫೈನಲ್ಸ್ ಪಂದ್ಯದಲ್ಲಿ ಆಳ್ವಾಸ್ ಕಾಲೇಜು ಪ್ರಥಮ ಪ್ರಶಸ್ತಿ ಪಡೆದುಕೊಂಡರೆ ಉಜಿರೆ ಎಸ್ಡಿಎಂ ಕಾಲೇಜು ದ್ವಿತೀಯ, ಶ್ರೀ ಉಮಾ ಮಹೇಶ್ವರಿ ಕಾಪಿಕಾಡ್ ತೃತೀಯ ಮತ್ತು ಫ್ರೆಂಡ್ಸ್ ಪಡುಪಣಂಬೂರು ಚತುರ್ಥ ಬಹುಮಾನ ಪಡೆಯಿತು.

ಸಮಾರಂಭದಲ್ಲಿ ಶ್ರೀ ಭಗವತಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಪೂಜಾರಿ, ಭಾರತ್ ಬ್ಯಾಂಕ್‌ನ ಅಧ್ಯಕ್ಷ ಸೂರ್ಯಕಾಂತ್ ಸುವರ್ಣ, ಮಂಗಳೂರು ಮಹಾನಗರ ಪಾಲಿಕೆಯ ಪ್ರತಿಪಕ್ಷ ನಾಯಕ ಅನಿಲ್ ಪೂಜಾರಿ, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಎ ಇಲೆವೆನ್ ಅಧ್ಯಕ್ಷ ಸುಭಾಷ್ ಕೋಟ್ಯಾನ್, ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ದಿನಕರ ಶೆಟ್ಟಿ, ಮೂಲ್ಕಿ ಪಟ್ಟಣ ಪಂಚಾಯತ್‌ ಸದಸ್ಯ ಯೋಗೀಶ್ ಕೋಟ್ಯಾನ್, ಮುಲ್ಕಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ್, ದಿನಕರ್ ಬಂಗೇರ, ಹರೀಶ್ ಪೂಜಾರಿ, ಪ್ರಭಾಕರ ಕರ್ಕೇರ, ಪ್ರಕಾಶ್, ಅನಿಲ್ ಸಾಲ್ಯಾನ್, ಅನಿಲ್ ಪೂಜಾರಿ, ಚಂದ್ರ ಕುಮಾರ್, ಹರೀಶ್ ಪೂಜಾರಿ ಉಪಸ್ಥಿತರಿದ್ದರು. ಪಂದ್ಯಾಕೂಟದಲ್ಲಿ ಒಟ್ಟು 18 ತಂಡಗಳು ಭಾಗವಹಿಸಿದ್ದವು. ಎ ಇಲೆವೆನ್ ಪದಾಧಿಕಾರಿಗಳಾದ ಭರತ್, ರಾಕೇಶ್ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News