ವೈದ್ಯಕೀಯ ಕ್ಷೇತ್ರದಲ್ಲಿಯೂ ವಿನೂತನ ಆವಿಷ್ಕಾರ ನಡೆಯುತ್ತಿವೆ: ಡಾ.ಯು.ಕೆ.ಮೋನು

Update: 2025-01-01 11:22 GMT

ಕೊಣಾಜೆ: ಇವತ್ತಿನ ತಂತ್ರಜ್ಞಾನ ಯುಗದಲ್ಲಿ ಆನ್ ಲೈನ್ ಗಳ ಅವಶ್ಯಕತೆ ಹೆಚ್ಚಾಗುತ್ತಿದೆ. ಕ್ಷಣ ಮಾತ್ರದಲ್ಲಿ ಯಾವುದೇ ರೀತಿಯ ಮಾಹಿತಿಗಳನ್ನು ಪಡೆದುಕೊಳ್ಳಲು ತಂತ್ರಜ್ಞಾನ ಸಹಕಾರಿಯಾಗಿದೆ. ಇಂತಹ ತಂತ್ರಜ್ಞಾನಗಳನ್ನು ಬಳಸಿ ಕೊಂಡು ವೈದ್ಯರು ಆನ್ ಲೈನ್ ಸಲಹಾ ಸೇವೆಗಳ ಮೂಲಕ ರೋಗಕ್ಕೆ ಪರಿಹಾರ ವನ್ನು ಕಂಡುಕೊಳ್ಳುವ ಕಾರ್ಯಕ್ಕೆ ಕಣಚೂರು ಆರ್ಯುವೇದ ಆಸ್ಪತ್ರೆ ಕೈ ಜೋಡಿಸಿದ್ದು ಇದರ ಪ್ರಯೋಜನ ಎಲ್ಲರೂ ಪಡೆಯುವಂತಾಗಲಿ ಎಂದು ಕಣಚೂರು ಇಸ್ಲಾಮಿಕ್ ಎಜ್ಯುಕೇಶನ್ ಟ್ರಸ್ಟ್ ಇದರ ಅಧ್ಯಕ್ಷ ಡಾ. ಹಾಜಿ ಯು.ಕೆ.ಮೋನು ಹೇಳಿದರು.

ಅವರು ಕಣಚೂರು ಆರ್ಯುವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಇದರ ಆನ್ಲೈನ್ ಸಲಹಾ ಸೇವೆಗಳ ಉದ್ಘಾಟನೆ ಯನ್ನು ಕಣಚೂರು ಆರ್ಯುವೇದ ಕಾಲೇಜಿನಲ್ಲಿ ಬುಧವಾರದಂದು ನೆರವೇರಿಸಿ ಮಾತನಾಡಿದರು.

ಕಾಲ ಬದಲಾದಂತೆ ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ವೈದ್ಯಕೀಯ ಕ್ಷೇತ್ರದಲ್ಲಿಯೂ ವಿನೂತನ ಆವಿಷ್ಕಾ ರಗಳು ನಡೆಯುತ್ತಿವೆ. ಅದೇ ರೀತಿ ಯಲ್ಲಿ ಕಣಚೂರು ಆರ್ಯುವೇದ ಆಸ್ಪತ್ರೆ ಯಲ್ಲಿ ಆನ್ ಲೈನ್ ಸೇವೆಗಳನ್ನು ರೋಗಿ ಗಳಿಗೆ ನೀಡುವ ಮೂಲಕ ಆಶಾದಾಯಕವಾದ ಹಾಗೂ ಪ್ರಯೋಜನಕಾರಿಯಾದ ಸೇವಾ ಕಾರ್ಯಕ್ಕೆ ಮುಂದಾಗಿದೆ‌ ಎಂದರು.

ಕಣಚೂರು ಇಸ್ಲಾಮಿಕ್ ಎಜ್ಯುಕೇಶನ್ ಟ್ರಸ್ಟ್ ಇದರ ನಿರ್ದೇಶಕ ಅಬ್ದುಲ್ ರಹಿಮಾನ್ ಮಾತನಾಡಿ , ಒಂದು ವರ್ಷದ ಹಿಂದೆ ಕಣಚೂರಿನಲ್ಲಿ ಸ್ಥಾಪನೆಯಾದ ಈ ಆರ್ಯುವೇದ ಆಸ್ಪತ್ರೆ ಇಂದು ಪರಿಣಾಮಕಾರಿಯಾದ ಚಿಕಿತ್ಸೆ ಯನ್ನು ನೀಡುವ ಮೂಲಕ ರೋಗಿಗಳಿಗೆ ಆತ್ಮಸ್ತೈರ್ಯ ವನ್ನು ನೀಡುವ ಮೂಲಕ ಕಾರ್ಯನಿರ್ವಹಿಸುತ್ತಿದೆ. ಉತ್ತಮ ಚಿಕಿತ್ಸೆ ಹಾಗೂ ರೋಗಿಗಳ ಜೊತೆಗೆ ಉತ್ತಮವಾದ ಬಾಂಧವ್ಯವನ್ನು ಬೆಳೆಸಿಕೊಂಡು ಆರೋಗ್ಯಕರ ಸಮಾಜವನ್ನು ರೂಪಿಸುವಲ್ಲಿ ಕಣಚೂರು ಆರ್ಯುವೇದ ಆಸ್ಪತ್ರೆ ಯ ವೈದ್ಯ ರು ಹಾಗೂ ಸಿಬ್ಬಂದಿಗಳು ಮುಂದಾಗಿರುವುದು ಶ್ಲಾಘನೀಯ ಎಂದ ಅವರು ಇಂನಿಂದ ಆರಂಭವಾದ ಆನಲೈನ್ ಸರ್ವಿಸ್ ನ ಪ್ರಯೋಜನ ಎಲ್ಲರಿಗೂ ಸಿಗುವಂತಾಗಲಿ ಎಂದರು‌.

ಈ ಸಂದರ್ಭದಲ್ಲಿ ಚಿಕಿತ್ಸಾ ಅಧೀಕ್ಷಕ ಕಾರ್ತಿಕೇಯ ಪ್ರಸಾದ್ ಉಪಸ್ಥಿತರಿದ್ದರು.

ಕಣಚೂರು ಆರ್ಯುವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲೆ ಡಾ. ವಿದ್ಯಾಪ್ರಭ ಆರ್ ಸ್ವಾಗತಿಸಿದರು‌, ವೈದ್ಯಾಧಿಕಾರಿ ಡಾ.ಮರಿಯಾ ರೋಸ್ ಇಸಾಕ್ ಕಾರ್ಯಕ್ರಮ ನಿರೂಪಿಸಿದರು. ವೈದ್ಯಕೀಯ ಸಲಹೆಗಾರ ಡಾ ಸುರೇಶ್ ನೆಗಲಗುಲಿ ವಂದಿಸಿದರು.

ಆನ್ ಲೈನ್ ಮೂಲಕ ಸಲಹೆ

ಮೈಸೂರುನಿಂದ ಸೃಜನ್ ಪಟೇಲ್ ಎಂಬ ರೋಗಿಯ ಜೊತೆಗೆ ಕಣಚೂರು ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಹಾಜಿ ಯು.ಕೆ.ಮೋನು ಹಾಗೂ ಇಲ್ಲಿನ ವೈದ್ಯಾಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿದರು. ತನ್ನ ಎಡಕಾಲಿನ‌ ಗಂಟಲಿನಲ್ಲಿ ಕಳೆದ ಇಪ್ಪತ್ತು ದಿನಗಳಿಂದ ಊತ ಬಂದಿದ್ದು ನೋವು ಇದೆ ಈಗಾಗಲೇ ಊರಿನ ಸಮೀಪದ ವೈದ್ಯರಲ್ಲಿ ಜೌಷಧಿಯನ್ನು ಪಡೆದಿದ್ದು ನೋವು ಹಾಗೂ ಊತ ಇನ್ನು ಕಡಿಮೆಯಾಗಿಲ್ಲ ಎಂದು ತಮ್ಮ ಸಮಸ್ಯೆಯನ್ನು ತಿಳಿಸಿದಾಗ ವೈದ್ಯರು ಆನ್ ಲೈನ್ ಮೂಲಕವೇ ಜೌಷಧಿಯ ಮೂಲಕ ಪರಿಹಾರೋಪಾಯವನ್ನು ಸೂಚಿಸಿದರು.




 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News