ಮಂಜನಾಡಿ ಮಸೀದಿ ಅಧೀನದ ಯಾತ್ರಿ ನಿವಾಸ ಕಟ್ಟಡ ಉದ್ಘಾಟನೆ
ದೇರಳಕಟ್ಟೆ: ಬುಸ್ತಾನುಲ್ ಉಲೂಂ ದರ್ಸ್ ಹಾಗೂ ಕೇಂದ್ರ ಜುಮ್ಮಾ ಮಸೀದಿ ಮಂಜನಾಡಿ ಇದರ ಅಧೀನದಲ್ಲಿ ನಿರ್ಮಾಣ ಗೊಂಡ ಯಾತ್ರಿ ನಿವಾಸ ಕಟ್ಟಡ ಉದ್ಘಾಟನೆ ಶುಕ್ರವಾರ ನಡೆಯಿತು.
ಕಟ್ಟಡ ಉದ್ಘಾಟಿಸಿ ಮಾತನಾಡಿದ ಸ್ಪೀಕರ್ ಯುಟಿ ಖಾದರ್ ಅವರು ಮಂಜನಾಡಿ ಗ್ರಾಮ ಈಗ ಅಭಿವೃದ್ಧಿ ಪಥದತ್ತ ಸಾಗು ತ್ತಿದೆ. ಈಗಾಗಲೇ ಮಸೀದಿಗೆ ಶೌಚಾಲಯ, ರಸ್ತೆ, ತಡೆಗೋಡೆ, ಇಂಟರ್ ಲಾಕ್ ಕಾಮಗಾರಿ ಮಾಡಲಾಗಿದೆ. ಇದೀಗ ಯಾತ್ರಿ ನಿವಾಸ ಕಟ್ಟಡ ಉದ್ಘಾಟನೆ ಆಗಿದೆ.ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಉತ್ತೇಜನ ನೀಡಲಾಗುವುದು ಎಂದು ಅವರು ಹೇಳಿದರು.
ಕೇಂದ್ರ ಜುಮ್ಮಾ ಮಸೀದಿ ಮುದರ್ರಿಸ್ ಅಹ್ಮದ್ ಬಾಖವಿ ದುಆ ನೆರವೇರಿಸಿದರು.
ಕೇಂದ್ರ ಜುಮ್ಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಅಝೀಝ್ ಪರ್ತಿಪ್ಪಾಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಸೀದಿ ಅಧ್ಯಕ್ಷ ಅಬ್ದುಲ್ ಅಝೀಝ್ ಮೈಸೂರು ಬಾವ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮ ದಲ್ಲಿ ಕೇಂದ್ರ ಜುಮ್ಮಾ ಮಸೀದಿ ಮಾಜಿ ಅಧ್ಯಕ್ಷ ಆಲಿಕುಂಞಿಪಾರೆ, ಉಪಾಧ್ಯಕ್ಷ ಎನ್.ಎಸ್ ಕರೀಂ, ಮೊಯ್ದಿನ್ ಕುಟ್ಟಿ, ಕಾರ್ಯದರ್ಶಿಗಳಾದ ಎನ್ ಐ ಮೊಹಮ್ಮದ್, ಹಮೀದ್ ಆರಂಗಡಿ,ಬಾಪಕುಂಞ, ನರಿಂಗಾನ ಗ್ರಾ.ಪಂ.ಅಧ್ಯಕ್ಷ ನವಾಝ್ ಕೋಡಿ,ದಿಲ್ ರಾಜ್ ಆಳ್ವ ಉಪಸ್ಥಿತರಿದ್ದರು.