ವಿಮ್ ಮಂಗಳೂರು ನಗರ ಜಿಲ್ಲಾಧ್ಯಕ್ಷೆಯಾಗಿ ನಿಶಾ ವಾಮಂಜೂರು ಆಯ್ಕೆ
ಮಂಗಳೂರು: ವಿಮೆನ್ ಇಂಡಿಯಾ ಮೂವ್ ಮೆಂಟ್(ವಿಮ್) ಇದರ ಮಂಗಳೂರು ನಗರ ಜಿಲ್ಲಾಧ್ಯಕ್ಷೆಯಾಗಿ ನಿಶಾ ವಾಮಂಜೂರು ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಶಮೀಮಾ ತುಂಬೆ ಆಯ್ಕೆಯಾಗಿದ್ದಾರೆ.
ಜಿಲ್ಲಾ ಉಪಾಧ್ಯಕ್ಷೆಯಾಗಿ ತಸ್ರಿನ ಅಂಕಜಲ್, ಕಾರ್ಯದಶಿಯಾಗಿ ಅಝ್ವೀನ ಅಕ್ರಮ್ ಕಾಟಿಪಳ್ಳ, ಕೋಶಾಧಿಕಾರಿಯಾಗಿ ಖತೀಜಾ ಇನೋಳಿ, ಸಮಿತಿ ಸದಸ್ಯರುಗಳಾಗಿ ಹಾಝರಾ ಮಲಾರ್, ನಸೀಮಾ ಮೂಡುಬಿದಿರೆ, ಸಂಶಾದ್ ಅಬೂಬಕರ್, ಮಿನಾಝ್ ಮುಲ್ಕಿ ಆಯ್ಕೆಯಾಗಿದ್ದಾರೆ.
ಮಂಗಳೂರಿನ ಪುರಭವನದಲ್ಲಿ ಜ.7ರಂದು ನಡೆದ ಎಸ್ ಡಿಪಿಐ ಜಿಲ್ಲಾ ಪ್ರತಿನಿಧಿ ಸಭೆಯಲ್ಲಿ WIM ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಪಕ್ಷದ ಆಡಳಿತದ ಬೆಳವಣಿಗೆಯ ಸುಲಭ ನಿರ್ವಹಣೆಯ ಉದ್ದೇಶದಿಂದ ಜಿಲ್ಲೆಯನ್ನು ವಿಭಜಿಸಿ ಪಕ್ಷದ ಮಂಗಳೂರು ನಗರ ಮತ್ತು ಮಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಅಸ್ತಿತ್ವಕ್ಕೆ ತರಲಾಯಿತು. ಅದೇ ರೀತಿ ಪಕ್ಷದ ಮಹಿಳಾ ಘಟಕವನ್ನು ಎರಡು ಜಿಲ್ಲೆಗಳಾಗಿ ವಿಂಗಡಿಸಿ ಉಳ್ಳಾಲ, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಮೂಡುಬಿದಿರೆ ಕ್ಷೇತ್ರಗಳನ್ನು ಒಳಗೊಂಡ ಮಂಗಳೂರು ನಗರ ಜಿಲ್ಲಾ ಸಮಿತಿ ರಚಿಸಲಾಗಿದೆ.
WIM ರಾಜ್ಯಾಧ್ಯಕ್ಷೆ ನಸೀಮಾ ಜೋಕಟ್ಟೆ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ ಆಯ್ಕೆ ಪ್ರಕ್ರಿಯೆ ನಡೆಸಿ ಕೊಟ್ಟರು.