ಜ.16: ಬರಕಾ ಶಾಲೆಯಲ್ಲಿ ಪೋಷಕ ಕೌಶಲ್ಯಗಳ ಕುರಿತು ಪೋಷಕರಿಗೆ ಉಚಿತ ಕಾರ್ಯಾಗಾರ
ಮಂಗಳೂರು: ಬರಕಾ ಇಂಟರ್ ನ್ಯಾಶನಲ್ ಸ್ಕೂಲ್ ಆ್ಯಂಡ್ ಕಾಲೇಜಿನಲ್ಲಿ ಜ.16ರಂದು ಸಂಜೆ 6:30ಕ್ಕೆ ಅಡ್ಯಾರ್ ನ ಬರಕಾ ಸಭಾಂಗಣದಲ್ಲಿ ಪೋಷಕರಿಗೆ ಪೋಷಕ ಕೌಶಲ್ಯಗಳ ಬಗ್ಗೆ ಉಚಿತ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಬರಕಾ ಇಂಟರ್ ನ್ಯಾಶನಲ್ ಸ್ಕೂಲ್ ಮತ್ತು ಕಾಲೇಜಿನ ಪ್ರಾಂಶುಪಾಲ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಪ್ರೇರಣಾ ಭಾಷಣಕಾರ ಶರ್ಫುದ್ದೀನ್ ಬಿ.ಎಸ್. 'ನಿಮ್ಮ ಮಗುವನ್ನು ಶೈಕ್ಷಣಿಕವಾಗಿ ಉತ್ಕೃಷ್ಟರಾಗಲು ಹೇಗೆ ಪ್ರೇರೇಪಿಸುವುದು?' ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ. ಪ್ರಸಿದ್ಧ ಪ್ರೇರಕ ಭಾಷಣಕಾರ ಮತ್ತು ಹೋಪ್ ಫೌಂಡೇಶನ್ ಅಧ್ಯಕ್ಷ ಸೈಫ್ ಸುಲ್ತಾನ್ 'ಆಧುನಿಕ ಯುಗದಲ್ಲಿ ಮಕ್ಕಳ ಪೋಷಣೆ ಹೇಗೆ ?' ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ. ಬರಕಾ ಇಂಟರ್ ನ್ಯಾಶನಲ್ ಸ್ಕೂಲ್ ಆ್ಯಂಡ್ ಕಾಲೇಜಿನ ಇಸ್ಲಾಮಿಕ್ ವಿಭಾಗದ ಪ್ರಾಂಶುಪಾಲ ಮತ್ತು ಖತೀಬ್ ಮುಹಮ್ಮದ್ ಹನೀಫ್ 'ಇಸ್ಲಾಮಿಕ್ ಮೌಲ್ಯಗಳನ್ನು ಅನುಸರಿಸಲು ನಿಮ್ಮ ಮಕ್ಕಳಿಗೆ ತರಬೇತಿ ನೀಡಲು ಪೋಷಕರಲ್ಲಿ ಇರಬೇಕಾದ ಕೌಶಲ್ಯ ' ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ. ತಜ್ಞರಿಂದ ಈ ವಿಷಯದ ಬಗ್ಗೆ ಹೆಚ್ಚಿನ ಒಳನೋಟ ಪಡೆಯಲು ಕೊನೆಯಲ್ಲಿ ಪ್ರಶ್ನೋತ್ತರದ ವ್ಯೆವಸ್ಥೆ ಮಾಡಲಾಗಿದೆ.
ನೋಂದಣಿಯ ಆಧಾರದ ಮೇಲೆ ತಂದೆ ತಾಯಿಗಳಿಬ್ಬರೂ ಹಾಜರಾಗಬಹುದು. ಭಾಗವಹಿಸಲು ಇಚ್ಛಿಸುವವರು https://forms.gle/mKxsr4A1UGrpo7DJ9 ಫಾರ್ಮ್ ಅನ್ನು ಬಳಸಿಕೊಂಡು ನೋಂದಣಿ ಮಾಡಿಕೊಳ್ಳಬೇಕು ಎಂದು ಪ್ರಕಟನೆ ತಿಳಿಸಿದೆ.