ಜ.12ರಂದು ಆಲಂಗಾರು ಬಾಲಯೇಸುವಿನ ವಾರ್ಷಿಕ ಹಬ್ಬ

Update: 2025-01-09 17:29 GMT

ಮೂಡುಬಿದಿರೆ: 2009ರಲ್ಲಿ ಆಲಂಗಾರಿನ ಹೋಲಿ ರೋಜರಿ ಚರ್ಚ್‌ನಲ್ಲಿ ಧರ್ಮಗುರು ವಿನ್ಸೆಂಟ್ ಡಿ'ಸೋಜ ಅವರ ನೇತೃತ್ವ ದಲ್ಲಿ ಆರಂಭಗೊಂಡಿರುವ ಪುಣ್ಯ ಕ್ಷೇತ್ರ ಬಾಲಯೇಸುವಿನ ವಾರ್ಷಿಕ ಹಬ್ಬವು ಜ.12ರಂದು ಅಲಂಗಾರ್ ಚರ್ಚ್‌ ನಲ್ಲಿ ನಡೆಯಲಿದೆ ಎಂದು ಚರ್ಚ್‌ ನ ಧರ್ಮಗುರು ಎಂ.ಮೆಲ್ವಿನ್ ನೊರೊನ್ಹಾ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸದ್ದಾರೆ.

ಈ ಕುರಿತು ಮಾಹಿತಿ ನೀಡಿದ ಅವರು, ವಾರ್ಷಿಕ ಹಬ್ಬದ ಅಂಗವಾಗಿ 9ದಿನಗಳ ನವೀನ ಪ್ರಾರ್ಥನೆಯು ಜ.3ರಿಂದ ಆರಂಭ ವಾಗಿದೆ. ಜ.11ರಂದು ಸಂಜೆ 4ಗಂಟೆಗೆ ಹೊರಕಾಣಿಕೆಯು ಅಲಂಗಾರ್ ಜಂಕ್ಷನ್ ನಿಂದ ಚರ್ಚ್ ವರೆಗೆ ನಡೆಯಲಿದೆ. ಸಂಜೆ ದಿವ್ಯ ಬಲಿ ಪೂಜೆ ನವೀನ ಪ್ರಾರ್ಥನೆ ಮತ್ತು ಬಾಲಯೇಸುವಿನ ಮೆರವಣಿಗೆಯು ಅಲಂಗಾರ್ ಜಂಕ್ಷನ್ ನಿಂದ ನಡೆಯಲಿದ್ದು ಬಾಲಯೇಸುವಿನ ಸಂದೇಶವನ್ನು ಸಾರಿ ಮೊಂಬತ್ತಿಯೊಂದಿಗೆ ಚರ್ಚ್ ನ ತನಕ ನಡೆಯಲಿದೆ. ಜ.12ರಂದು ಇಂಗ್ಲಿಷ್ ನಲ್ಲಿ ಬಲಿಪೂಜೆ ನಡೆಯಲಿದೆ. ಬಳ್ಳಾರಿ ಧರ್ಮಪ್ರಾಂತ ಧರ್ಮಾಧ್ಯಕ್ಷ ಅತಿವಂದನೀಯ ಹೆನ್ರಿಡಿಸೋಜ ಹಾಗೂ ಅನೇಕ ಧರ್ಮಗುರುಗಳು ಪಾಲೊಳ್ಳಲಿದ್ದಾರೆ. ಭಕ್ತಾದಿಗಳಗೆ ಅನ್ನಸಂತರ್ಪಣೆ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಎಡ್ವರ್ಡ್ ಸೆರಾವೋ, ಕಾರ್ಯದರ್ಶಿ ಲಾರೆಸ್ಸ್ ಡಿಕುನ್ನ, ರಾಜೇಶ್ ಡಿಸೋಜ ಕಡಲಕೆರೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News