ಪುತ್ತೂರು: ಸಾಲ್ಮರ-ಕುಂಬ್ರದಲ್ಲಿ ಮೀಫ್ ವತಿಯಿಂದ ಕಾರ್ಯಾಗಾರ

Update: 2025-01-09 15:44 GMT

ಪುತ್ತೂರು: ತಾಲೂಕಿನ ಸಾಲ್ಮರದ ಮೌಂಟೆನ್ ವ್ಯೆ ಆಂಗ್ಲಮಾಧ್ಯಮ ಶಾಲೆ ಮತ್ತು ಕುಂಬ್ರದ ಮರ್ಕಝುಲ್ ಹುದಾ ಪಿ.ಯು ಕಾಲೇಜಿನಲ್ಲಿ ದ.ಕ.ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್) ವತಿಯಿಂದ ಯೆನೆಪೋಯ ಗ್ರೂಪ್‌ನ ಸಹಕಾರದಲ್ಲಿ NEET/ JEE/ CUET/ BITSAT ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಪ್ರೌಢಶಾಲಾ ವಿದ್ಯಾರ್ಥಿ ಗಳಿಗೆ ಮಾಹಿತಿ ಕಾರ್ಯಾಗಾರ ಬುಧವಾರ ನಡೆಯಿತು.

ಈ ಸಂದರ್ಭ ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ, ಆಡಳಿತ ಕಾರ್ಯದರ್ಶಿ ಅನ್ವರ್ ಹುಸೈನ್, ಸಂಚಾಲಕ ಬಿ.ಎ ಇಕ್ಬಾಲ್, ಅನ್ಸಾರುದ್ದೀನ್ ಎಜುಕೇಷನಲ್ ಟ್ರಸ್ಟ್‌ನ ಹಾಜಿ ಯು. ಮುಹಮ್ಮದ್ ಪಡೀಲ್, ಶಾಲಾ ಸಂಚಾಲಕ ಬಿ. ಮುಹಮ್ಮದ್ ಸಾಹೇಬ್ ಮತ್ತಿತರರು ಉಪಸ್ಥಿತರಿದ್ದರು.

*ಕುಂಬ್ರದ ಮರ್ಕಝುಲ್ ಹುದಾ ಪಿ.ಯು ಕಾಲೇಜಿನಲ್ಲಿ ನಡೆದ ಕಾರ್ಯಾಗಾರದಲ್ಲಿ ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ, ಆಡಳಿತ ಕಾರ್ಯದರ್ಶಿ ಅನ್ವರ್ ಹುಸೈನ್, ಸಂಚಾಲಕ ಬಿ.ಎ ಇಕ್ಬಾಲ್, ಕುಂಬ್ರ ಮರ್ಕಝುಲ್ ಹುದಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ಹಾಜಿ ಅಬ್ದುಲ್ ರಹ್ಮಾನ್, ಕಾರ್ಯದರ್ಶಿಗಳಾದ ಅಬ್ದುಲ್ ರಶೀದ್ ಮತ್ತು ಯೂಸುಫ್, ಪ್ರಾಂಶುಪಾಲೆ ಸಂಧ್ಯಾ ಮತ್ತಿತರರು ಉಪಸ್ಥಿತರಿದ್ದರು.

ಎರಡೂ ಕಾರ್ಯಾಗಾರದಲ್ಲಿ ಯೆನೆಪೊಯ ಸೆಂಟರ್ ಫಾರ್ ಅಡ್ವಾನ್ಸ್ಡ್ ಲರ್ನಿಂಗ್ (YCAL) ಬಹರೈನ್ ಇದರ ನಿರ್ದೇಶಕ ಪ್ರೊ. ಸಿನಾನ್ ಝಕರಿಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕಾರ್ಯಾಗಾರ ನಡೆಸಿಕೊಟ್ಟರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News