ಯೆನೆಪೋಯ ದಂತ ಮಹಾವಿದ್ಯಾಲಯದಲ್ಲಿ ‘ಮೆಡಿ ಸ್ಟಡಿ ಗೊ’ ಕಲಿಕಾ ಕಾರ್ಯಕ್ರಮ
ಮಂಗಳೂರು: ದೇರಳಕಟ್ಟೆಯ ಯೆನೆಪೋಯ ದಂತ ಮಹಾವಿದ್ಯಾಲಯ ಮತ್ತು ಟೀಚ್ ಸ್ಪೂನ್ ಎಜ್ಯುಟೆಕ್ ಸಹಯೋಗ ದೊಂದಿಗೆ ‘ಮೆಡಿ ಸ್ಟಡಿ ಗೊ’ ಕಲಿಕಾ ಕಾರ್ಯಕ್ರಮವನ್ನು ದೇರಳಕಟ್ಟೆಯ ಯೆನೆಪೋಯ ದಂತಮಹಾವಿದ್ಯಾಲಯದ ಆಡಿಟೋರಿಯಮ್‌ನಲ್ಲಿ ಗುರುವಾರ ಆಯೋಜಿಸಲಾಗಿತ್ತು.
ಕಾರ್ಯಾಗಾರದಲ್ಲಿ ‘ಮೆಡಿ ಸ್ಟಡಿ ಗೊ’ ಅಪ್ಲಿಕೇಶನ್‌ನುಮೊದಲ ಬಾರಿಗೆ ಪರಿಚಯಿಸಲಾಯಿತು. ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆ ಎನಿಸುವ ಅತ್ಯಂತ ಕ್ಲಿಷ್ಟಕರವಾದ ವಿಷಯಗಳನ್ನು ಅತ್ಯಂತ ಸರಳ ಹಾಗೂ ಸುಲಭವಾಗಿ ಮೈಂಡ್ ಮ್ಯಾಪ್‌ನ ಸಹಾಯದಿಂದ ಹೇಗೆ ಕಲಿಯಬಹುದು , ಬಣ್ಣ, ಸಂಕೇತಗಳ ಮುಖಾಂತರ ಹೇಗೆ ನೆನಪಿಟ್ಟುಕೊಳ್ಳಬಹುದು ಎಂದು ಡಾ. ಪಿ.ಚಾಂದನಿ ಪಿಂಟೊ ಹಾಗೂ ಡಾ. ಪಲಕ್ ಭಂಡಾರಿ ವಿವರಿಸಿದರು.
ಕಾರ್ಯಕ್ರಮದಲ್ಲಿ ರಸ ಪ್ರಶ್ನೆ ಮತ್ತು ಉಪಯುಕ್ತ ಮೈಂಡ್ ಮ್ಯಾಪ್ ಗಳನ್ನು ಸ್ವತಃ ವಿದ್ಯಾರ್ಥಿಗಳೆ ಪ್ರಾಯೋಗಿಕವಾಗಿ ತಯಾರಿಸಿದರು.
ಕಾರ್ಯಕ್ರಮದಲ್ಲಿ ಐಡಿಎ ಅಧ್ಯಕ್ಷ ಡಾ. ಶಿವ ಶರಣ್ ಶೆಟ್ಟಿ, ಟೀಚ್ ಸ್ಪೂನ್ ಎಜುಟೆಕ್ ಚೇರ್ಮನ್ ಡಾ. ಜಾರ್ಜ್ ಪಿ.ಜೋನ್, ಯೆನೆಪೋಯ ವಿವಿ ಕುಸಚಿವ ಡಾ. ಕೆ ಎಸ್ ಗಂಗಾಧರ್ ಸೋಮಯಾಜಿ, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ದಂತ ಕಾಲೇಜಿನ ಪ್ರಾಂಶುಪಾಲ ಡಾ. ಲಕ್ಷ್ಮೀಕಾಂತ್ ಚಾತ್ರ, ಡೀನ್ ಡಾ. ಶಾಮ್ ಎಸ್ ಭಟ್, ಉಪ ಪ್ರಾಂಶುಪಾಲ ಡಾ. ಹಸನ್ ಸರ್ಫಾರಾಝ್ ಉಪಸ್ಥಿತರಿದ್ದರು.
ಡಾ. ರಕ್ಷಾ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ದಂತಕಾಲೇಜಿನ ಸಿಬ್ಬಂದಿ ವರ್ಗ, ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.