ಡಾ.ಅವಿನ್ ಆಳ್ವಗೆ ಐಎಂಎ ಪ್ರಶಸ್ತಿ ಪ್ರದಾನ

Update: 2025-01-10 13:06 GMT

ಮಂಗಳೂರು: ಹೈದರಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಐಎಂಎ ರಾಷ್ಟ್ರೀಯ ಸಮ್ಮೇಳನದಲ್ಲಿ 2023-24 ರ ಅತ್ಯುತ್ತಮ ರಾಷ್ಟ್ರೀಯ ಐಎಂಎ ಕಾರ್ಯದರ್ಶಿ ಪ್ರಶಸ್ತಿಯನ್ನು ಮಂಗಳೂರು ಶಾಖೆಯ ಡಾ.ಅವಿನ್ ಆಳ್ವ ಸ್ವೀಕರಿಸಿದರು.

ರಾಷ್ಟ್ರೀಯ ಐಎಂಎ ಅಧ್ಯಕ್ಷ ಡಿಆರ್ ಆರ್ ವಿ ಅಶೋಕನ್ ಪ್ರಶಸ್ತಿ ವಿತರಿಸಿದರು. ಈ ಸಂದರ್ಭ ದಲ್ಲಿ ರಾಷ್ಟ್ರೀಯ ಐಎಂಎ ಕಾರ್ಯದರ್ಶಿ ಡಾ ಅನಿಲ್ ಕುಮಾರ್ ಜೆ ನಾಯಕ್, ರಾಷ್ಟ್ರೀಯ ಅಧ್ಯಕ್ಷ (ಚು) ಡಾ ದಿಲೀಪ್ ಭಾನುಶಾಲಿ, ಸಂಘಟನಾ ಅಧ್ಯಕ್ಷರುಡಾ ಇ ರವೀಂದ್ರ ರೆಡ್ಡಿ,ಐಎಂಎ ಪೋಷಕ ಕೇತನ್ ದೇಸಾಯಿ ಮತ್ತು ಇತರ ಹಿರಿಯ ಐಎಂಎ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News