ಆರೋಗ್ಯ ಕವಚದ ಸಿಬ್ಬಂದಿಗಳ ಇಎಂಟಿ ದಿನಾಚರಣೆ

Update: 2025-04-02 19:32 IST
ಆರೋಗ್ಯ ಕವಚದ ಸಿಬ್ಬಂದಿಗಳ ಇಎಂಟಿ ದಿನಾಚರಣೆ
  • whatsapp icon

ಉಡುಪಿ, ಎ.2: ಜಿಲ್ಲೆಯ 108 ಆಂಬುಲೆನ್ಸ್ ಆರೋಗ್ಯ ಕವಚದ ಸಿಬ್ಬಂದಿಗಳ ಇಎಂಟಿ(ಏಮರ್ಜನ್ಸಿ ಮೆಡಿಕಲ್ ಟೆಕ್ನಿಶಿಯನ್) ದಿನಾಚರಣೆ ಯನ್ನು ಕೋಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬುಧವಾರ ಆಯೋಜಿಸಲಾಗಿತ್ತು.

ಕೇಂದ್ರದ ಆಡಳಿತಾಧಿಕಾರಿ ಮತ್ತು ವೈದ್ಯಾಧಿಕಾರಿಗಳು ಮತ್ತು ಸರಕಾರಿ ಆಸ್ಪತ್ರೆಯ ಸಿಬ್ಬಂದಿ ಮತ್ತು 108 ಆರೋಗ್ಯ ಕವಚ ಉಡುಪಿ ಜಿಲ್ಲೆಯ ಇಎಂಟಿ ಮತ್ತು ಪೈಲಟ್ ಸಿಬ್ಬಂದಿಗಳು ಮತ್ತು ಉಡುಪಿ ಜಿಲ್ಲೆಯ 108 ಆರೋಗ್ಯ ಕವಚ ಅಧಿಕಾರಿ ಮಹಾಬಲ ನೇತೃತ್ವದಲ್ಲಿ ಇಎಂಟಿ ಹಾಗೂ ಪೈಲೆಟ್‌ಗಳು ಕೇಕ್ ಕತ್ತರಿಸುವ ಮೂಲಕ ಇಎಂಟಿ ದಿನವನ್ನು ಆಚರಿಸಿದರು. 108 ಆರೋಗ್ಯ ಕವಚದ ಸೇವೆ ಇನ್ನಷ್ಟು ಉತ್ತಮಗೊಳ್ಳಲಿ ಎಂದು ವೈದ್ಯಾಧಿಕಾರಿಗಳು ಹಾರೈಸಿದರು. ಇದೇ ವೇಳೆ ಕೋಟ 108 ಸಿಬ್ಬಂದಿಗಳನ್ನು ಗೌರವಿಸಲಾಯಿತು.

ಈ ಸಂದರ್ಭ ಕೋಟ ಸಮುದಾಯ ಆರೋಗ್ಯ ಕೇಂದ್ರದ ಹೆರಿಗೆ ಮತ್ತು ಸ್ತ್ರೀ ಆರೋಗ್ಯ ತಜ್ಞೆ ಡಾ.ಆರತಿ ಕಾರಂತ್, ದಂತ ವೈದ್ಯಾಧಿಕಾರಿ ಡಾ.ಅನಾಲಿನ್, ಆಡಳಿತಾಧಿಕಾರಿ ಡಾ.ಮಾಧವ ಪೈ, ಹಿರಿಯ ವೈದಾಧಿ ಕಾರಿ ಡಾ.ವಿಶ್ವನಾಥ್, ಸಮುದಾಯ ಆರೋಗ್ಯ ಕೇಂದ್ರದ 108 ಕವಚ ಸಿಬ್ಬಂದಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News