ವಸತಿ ರಹಿತ ನಾಗರಿಕರಿಗೆ ರಾತ್ರಿ ತಂಗಲು ವ್ಯವಸ್ಥೆ: ಮಂಗಳೂರು ಮಹಾನಗರ ಪಾಲಿಕೆ

Update: 2023-12-08 16:03 GMT

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದೀನ್ ದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ನಗರದ ವಸತಿ ರಹಿತರಿಗೆ ಆಶ್ರಯ ಉಪಘಟಕದಡಿ ನಗರದ ಬೀದಿ ಬದಿಗಳಲ್ಲಿ, ಬಸ್ ನಿಲ್ದಾಣ, ಅಂಗಡಿಗಳ ಎದುರುಗಡೆ, ಹಳೆ ಕಟ್ಟಡ, ಸಾರ್ವಜನಿಕ ಮೈದಾನ ಅಥವಾ ಇನ್ನಿತರ ಪ್ರದೇಶಗಳಲ್ಲಿ ರಾತ್ರಿ ಸಮಯದಲ್ಲಿ ವಿಶ್ರಾಂತಿ ಪಡೆಯುತ್ತಿರುವ ವಸತಿ ರಹಿತ ನಾಗರಿಕರಿಗೆ ತಂಗಲು ವ್ಯವಸ್ಥೆ ಮಾಡಲಾಗಿದೆ.

ಮಂಗಳೂರು ಮಹಾನಗರ ಪಾಲಿಕೆಯು ಸ್ವಯಂ ಸೇವಾ ಸಂಸ್ಥೆಗಳ ನಿರ್ವಹಣೆ ಮತ್ತು ಮೇಲ್ವಿಚಾರಣೆಯಲ್ಲಿ ಬಂದರು, ಉರ್ವ ಮಾರ್ಕೆಟ್ ಮತ್ತು ಸುರತ್ಕಲ್ ಪ್ರದೇಶದಲ್ಲಿ 3 ನಗರ ವಸತಿ ರಹಿತರ ಆಶ್ರಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಈ ಕೇಂದ್ರಗಳಲ್ಲಿ ನಿವಾಸಿಗಳಿಗೆ ಉಚಿತ ತಂಗುವ ವ್ಯವಸ್ಥೆ, ಅರೋಗ್ಯ ತಪಾಸಣೆ, ಸಾಮಾಜಿಕ ಭದ್ರತೆ ಯೋಜನಾ ಸೌಲಭ್ಯ ಪಡೆಯಬಹುದಾಗಿದೆ.

ಅರ್ಹರು ಎನ್. ಕೃಷ್ಣಾನಂದ ಪೈ, ಸುವರ್ಣಾ ಕರ್ನಾಟಕ ಸಂಸ್ಥೆ (ರಿ), ದೂ.ಸಂ: 9845567552, ನಗರ ವಸತಿ ರಹಿತರ ಆಶ್ರಯ ಕೇಂದ್ರ, ದರಿಯಾ ಐಸ್ ಪ್ಲಾಂಟ್ ಎದುರುಗಡೆ, ಹಳೆ ಬಂದರು ರಸ್ತೆ, ಬಂದರು ಮಂಗಳೂರು ಮತ್ತು ಭರತ್ ಎಸ್.ಕರ್ಕೇರ, ವಿಧಾತ್ರಿ ಕಲಾವಿದೆರ್ ಕೈಕಂಬ-ಕುಡ್ಲ (ರಿ)ದೂ.ಸಂ: 9164632658 ನಗರ ವಸತಿ ರಹಿತರ ಆಶ್ರಯ ಕೇಂದ್ರ, ಉರ್ವ ಸಮುದಾಯ ಭವನ ಉರ್ವಾ ಮಾರ್ಕೆಟ್ ಮಂಗಳೂರು ಹಾಗೂ ಚಿದಾನಂದ ಅದ್ಯಪಾಡಿ, ವಿಧಾತ್ರಿ ಕಲಾವಿದೆರ್ ಕೈಕಂಬ-ಕುಡ್ಲ (ರಿ), ದೂ.ಸಂ: 9844023564, ನಗರ ವಸತಿ ರಹಿತರ ಆಶ್ರಯ ಕೇಂದ್ರ ದುರ್ಗಾ ಕಾಂಪ್ಲೆಕ್ಸ್, ಸುರತ್ಕಲ್ ರೈಲ್ವೆ ಸ್ಟೇಷನ್ ರಸ್ತೆ, ಸುರತ್ಕಲ್ ಇವರನ್ನು ಸಂಪರ್ಕಿಸಬಹುದು.

ರಾತ್ರಿ ವಸತಿ ರಹಿತ ನಾಗರಿಕರು ಕಂಡು ಬಂದಲ್ಲಿ ಸಾರ್ವಜನಿಕರು ನಗರ ವಸತಿ ರಹಿತರ ಆಶ್ರಯ ಕೇಂದ್ರಗಳ ನಿರ್ವಹಣೆ ಮತ್ತು ಮೇಲ್ವಿಚಾರಣಾ ಸ್ವಯಂ ಸೇವಾ ಸಂಸ್ಥೆಗಳಿಗೆ ಮಾಹಿತಿ ನೀಡಬಹುದು ಎಂದು ಪಾಲಿಕೆಯ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News