ಅ.5ರಿಂದ 8: ‘ಕ್ಯಾಪಿಕಾನ್ 2023’ ಸಮೇಳನ

Update: 2023-10-04 09:40 GMT

ಮಂಗಳೂರು, ಅ.4: ಭಾರತೀಯ ರೋಗಶಾಸ್ತ್ರಜ್ಞರು ಮತ್ತು ಸೂಕ್ಷ್ಮ ಜೀವ ವಿಜ್ಞಾನಿಗಳ ಸಂಘದ ಕರ್ನಾಟಕ ವಿಭಾಗದ ವತಿಯಿಂದ ನಡೆಯುವ ರಾಜ್ಯ ಮಟ್ಟದ ಪ್ಯಾಥಾಲಜಿ ಸಮ್ಮೇಳನ ‘ಕ್ಯಾಪಿಕಾನ್ 2023’ ಅ. 5ರಿಂದ 8ರವರೆಗೆ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಯೋಜಿಸುತ್ತಿದೆ.

ಸುದ್ದಿಗೋಷ್ಟಿಯಲ್ಲಿ ಬುಧವಾರ ಈ ಬಗ್ಗೆ ಮಾಹಿತಿ ನೀಡಿದ ಪ್ಯಾಥಾಲಜಿ ವಿಭಾಗದ ಮುಖ್ಯಸ್ಥ ಹಾಗೂ ಸಂಘಟನಾ ಅಧ್ಯಕ್ಷ ಡಾ. ಉಮಾಶಂಕರ್, ಸಮ್ಮೇಳನದ ಅಂಗವಾಗಿ ಫದಾರ್ ಮುಲ್ಲರ್ ಮೆಡಿಕಲ್ ಕಾಲೇಜು, ಕೆಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಮತ್ತು ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಸಹಯೋಗದಲ್ಲಿ ಅ. 5ರಂದು ವಿವಿಧ ಅತ್ಯಾಧುನಿಕ ವಿಷಯಗಳ ಕುರಿತು ಏಳು ಕಾರ್ಯಾಗಾರಗಳು ನಡೆಯಲಿವೆ ಎಂದರು.

ರೋಗಶಾಸ್ತ್ರ ಕ್ಷೇತ್ರದಲ್ಲಿರುವ ಪ್ರಮುಖ ಭಾಷಣಕಾರರನ್ನು ಒಳಗೊಂಡಿರುವ ಈ ಸಮ್ಮೇಳನದಲ್ಲಿ 350 ಸಂಶೋಧನಾ ಪ್ರಬಂಧಗಳು ಮತ್ತು ಪೋಸ್ಟರ್‌ಗಳು ಸಲ್ಲಿಕೆಯಾಗಲಿವೆ. ಸುಧಾರಿತ ಪ್ರಯೋಗಾಲಯ ಉಪಕರಣಗಳು, ರೋಗ ನಿರ್ಣಯದ ಉಪಕರಣಗಳು ಮತ್ತು ವೈದ್ಯಕೀಯ ತಂತ್ರಜ್ಞಾನಗಳ ಪ್ರದರ್ಶನ, ಸಂವಾದ ನಡೆಸುವ ಅಕವಾಶ ಸಮ್ಮೇಳನದಲ್ಲಿ ಲಭ್ಯವಾಗಲಿದೆ. ಅ. 6ರಂದು ಸಂಜೆ 4.30ಕ್ಕೆ ಸಮ್ಮೇಳನ ಉದ್ಘಾಟನೆಗೊಳ್ಳಲಿದೆ. ಮಣಿಪಾಲ್ ಸ್ಕೂಲ್ ಆಫ್ ಲೈಫ್ ಸಾಯನ್ಸ್‌ನ ನಿರ್ದೇಶಕ ಡಾ.ಬಿ.ಎಸ್. ಸತೀಶ್ ರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ನಿರ್ದೇಶಕರಾದ ರೆ.ಫಾ. ರಿಚ್ಚರ್ಡ್ ಅಲೋಶಿಯಸಲ್ ಕುವೆಲ್ಲೋ ಅಧ್ಯಕ್ಷತೆ ವಹಿಸಲಿದ್ದಾರೆ ಎಂದವರು ಹೇಳಿದರು.

ಗೋಷ್ಟಿಯಲ್ಲಿ ಸಂಘಟನಾ ಕಾರ್ಯದರ್ಶಿ ಡಾ. ನಿಶಾ ಮಾರ್ಲ, ಜಂಟಿ ಸಂಘಟನಾ ಕಾರ್ಯದರ್ಶಿ ಡಾ. ರೇಷ್ಮಾ ಕಿಣಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News